ಆಟೋ ರಿಕ್ಷಾ ಪ್ರಯಾಣ ದರ ಶೀಘ್ರದಲ್ಲೇ ಶೇ.20ರಷ್ಟು ಹೆಚ್ಚಳ

Prasthutha|

ಬೆಂಗಳೂರು ; ಕೊರೋನಾ ಕಾರಣದಿಂದ ‘ಖಾಲಿ’ಯಾಗಿದ್ದ ಬದುಕು ನಿಧಾನವಾಗಿ ಹಳಿಗೆ ಮರಳುತ್ತಿರುವಾಗಲೇ ಸಾರಿಗೆ ಇಲಾಖೆ ರಾಜ್ಯ ರಾಜಧಾನಿಯ ಜನ ಸಾಮಾನ್ಯರಿಗೆ ಬಿಗ್ ಶಾಕ್ ನೀಡಿದೆ.
ಬೆಂಗಳೂರಿನಲ್ಲಿ ಅಟೋ ರಿಕ್ಷಾ ಪ್ರಯಾಣ ದರವನ್ನು ಶೇ.20ರಷ್ಟು ಹೆಚ್ಚಳ ಮಾಡುವ ಕುರಿತು ಚಿಂತನೆ ನಡೆಸಿದೆ.
ಇಂಧನ ದರ ಏರಿಕೆಯ ಕಾರಣದಿಂದ ಪ್ರಯಾಣ ದರ ಹೆಚ್ಚಿಸುವಂತೆ ಕಳೆದ ಮೂರು ವರ್ಷಗಳಿಂದ ಆಗ್ರಹಿಸುತ್ತಿದ್ದ ಸಿಲಿಕಾನ್ ಸಿಟಿಯ ಆಟೊ ರಿಕ್ಷಾ ಚಾಲಕರ ಮನವಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಕೊನೆಗೂ ಸ್ಪಂದಿಸಿದ್ದಾರೆ.
ಸಾರಿಗೆ ಇಲಾಖೆಯ ಅಧಿಕಾರಿಗಳು ಆಟೊ ರಿಕ್ಷಾ ಚಾಲಕರ ಒಕ್ಕೂಟಗಳ ಜೊತೆಗೆ ಸಭೆ ನಡೆಸಿದ್ದು, ಸಭೆಯಲ್ಲಿ ಆಟೊ ರಿಕ್ಷಾ ಪ್ರಯಾಣದರವನ್ನು ಶೇ 20 ರಷ್ಟು ಹೆಚ್ಚಳ ಮಾಡುವ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ.
ಈ ಮೂಲಕ ಬೆಂಗಳೂರಿನಲ್ಲಿ ಆಟೊ ರಿಕ್ಷಾ ಪ್ರಯಾಣದ ಕನಿಷ್ಠ ದರ 25 ರೂ.ನಿಂದ 30 ರೂ.ಗೆ ಹೆಚ್ಚಳವಾಗಲಿದೆ. ನಂತರ ಪ್ರತಿ ಕಿ.ಮೀ ಗೆ ಈಗಿರುವ 13 ರೂ. ಬದಲಾಗಿ 16 ರೂ.ಗೆ ಹೆಚ್ಚಿಸಲಾಗಿದೆ. ಕನಿಷ್ಠ ದರದಲ್ಲಿ ಪ್ರಯಾಣಿಸಬಹುದಾದ ದೂರವನ್ನು 1.8 ಕಿಲೋಮೀಟರ್ಗೆ ಬದಲಾಗಿ 1.9 ಕಿಲೋಮೀಟರ್ ನಿಗದಿಪಡಿಸಿದೆ ಎನ್ನಲಾಗಿದೆ.

Join Whatsapp