ಸಿದ್ದೀಕ್ ಕಾಪ್ಪನ್ ಬಂಧನ ಅಕ್ರಮ: ವಕೀಲ ಮಧುವನ್ ದತ್ ಚತುರ್ವೇದಿ ಪ್ರತಿಪಾದನೆ

Prasthutha|

ಲಕ್ನೋ: ಯುಎಪಿಎ ಪ್ರಕರಣದಲ್ಲಿ ಬಂಧಿತರಾದ ಪತ್ರಕರ್ತ ಸಿದ್ದೀಕ್ ಕಾಪ್ಪನ್ ರನ್ನು ಅಕ್ರಮ ಬಂಧನದಲ್ಲಿರಿಸಲಾಗಿದೆ ಎಂದು ಅವರ ಪರ ವಕೀಲ ಮಧುವನ್ ದತ್ ಚತುರ್ವೇದಿ ತಿಳಿಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಚತುರ್ವೇದಿ, ಉತ್ತರಪ್ರದೇಶದ ಮಥುರಾ ಜೈಲಿನಲ್ಲಿ ಒಂದು ವರ್ಷವನ್ನು ಕಳೆದಿರುವ ಕಾಪ್ಪನ್ ಅವರ ಬಂಧನ ಕಾನೂನುಬಾಹಿರ. ಆರೋಪವನ್ನು ಸಾಬೀತುಪಡಿಸುವ ಸೂಕ್ತ ಸಾಕ್ಷ್ಯಾಧಾರಗಳು ತನಿಖಾ ಸಂಸ್ಥೆ ಬಳಿ ಇಲ್ಲ ಎಂದು ಅವರು ತಿಳಿಸಿದರು.

ಯುಎಪಿಎ ಪ್ರಕರಣದಲ್ಲಿ ಆರೋಪಿಸಲಾಗಿರುವ ಯಾವುದೇ ಅಂಶಗಳು ತನಿಖಾ ಸಂಸ್ಥೆಗಳು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಕಂಡುಬಂದಿಲ್ಲ ಎಂದು ವಕೀಲರು ತಿಳಿಸಿದರು.

- Advertisement -

ಕೇರಳ ಮೂಲದ ಪತ್ರಕರ್ತರಾದ ಸಿದ್ದೀಕ್ ಕಾಪ್ಪನ್ ಹತ್ರಾಸ್ ನಲ್ಲಿ ನಡೆದ ದಲಿತ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರವನ್ನು ವರದಿ ಮಾಡಲು ಅಲ್ಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಉತ್ತರಪ್ರದೇಶದ ಪೊಲೀಸರು ಮಾರ್ಗ ಮಧ್ಯೆ ಬಂಧಿಸಿದ್ದರು.

ಈ ಪ್ರಕರಣದಲ್ಲಿ ಕಾಪ್ಪನ್ ಸೇರಿದಂತೆ ಎಂಟು ಮಂದಿಯ ವಿರುದ್ಧ ಉತ್ತರಪ್ರದೇಶ ಪೊಲೀಸರು ಯುಎಪಿಎ, ಐಟಿ ಕಾಯ್ದೆ ಮತ್ತು ಐಪಿಸಿ ಕಾಯ್ದೆಗಳ ಅಡಿಯಲ್ಲಿ ದೇಶದ್ರೋಹ, ದ್ವೇಷವನ್ನು ಹರಡುವುದು ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ಕೇಸ್ ಗಳನ್ನು ದಾಖಲಿಸಿದ್ದಾರೆ.

Join Whatsapp