“ಹಿಂದೂಗಳ ಎದುರು ನಮಾಝ್ “; ಕ್ಷಮೆ ಕೇಳಿದ ವಕಾರ್ ಯೂನಸ್

Prasthutha|

ಪಾಕಿಸ್ತಾನ:ಐಸಿಸಿ T-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ- ಪಾಕಿಸ್ತಾನದ ಪಂದ್ಯದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಕೆಸರೆರಚಾಟ ಇನ್ನೂ ನಿಂತಿಲ್ಲ. ಈ‌ ನಡುವೆ ಪಾಕಿಸ್ತಾನದ ನ್ಯೂಸ್ ಚಾನಲ್’ಒಂದರ ಚರ್ಚೆಯಲ್ಲಿ ಭಾಗವಾಹಿಸಿದ್ದ ಪಾಕಿಸ್ತಾನ ತಂಡದ ಮಾಜಿ ವೇಗಿ ವಕಾರ್ ಯೂನಸ್, ಹಿಂದೂಗಳ ನಡುವೆ ರಿಜ್ವಾನ್ ನಮಾಝ್ ಮಾಡಿದ್ದು, ರಿಜ್ವಾನ್ ಬ್ಯಾಟಿಂಗ್’ಗಿಂತಲೂ ಹೆಚ್ಚು ಖುಷಿ ಹಾಗೂ ತೃಪ್ತಿ ನೀಡುವ ವಿಚಾರ ಎಂಬ ಹೇಳಿಕೆ ನೀಡಿದ್ದರು.ಈ ಚರ್ಚೆಯಲ್ಲಿ ವಕಾರ್ ಯೂನಿಸ್ ಜೊತೆ ಮಾಜಿ ವೇಗಿ ಶೋಯೆಬ್ ಅಕ್ತರ್ ಕೂಡ ಪಾಲ್ಗೊಂಡಿದ್ದರು.

- Advertisement -


ಆದರೆ ಕ್ರೀಡೆಯ ನಡುವೆ ಧಾರ್ಮಿಕ ವಿಚಾರವನ್ನು ಎಳೆದು ತಂದಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.
ತನ್ನ ಹೇಳಿಕೆಗೆ ತೀವ್ರ ವಿರೋಧವೂ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ವಕಾರ್ ಯೂನಸ್ ಕ್ಷಮೆಯಾಚಿಸಿದ್ದಾರೆ.

ವಕಾರ್‌ ಯೂನಿಸ್ ಹೇಳಿಕೆಗೆ ಖ್ಯಾತ ಕಮೆಂಟೇಟರ್ ಹರ್ಷಾ ಬೋಗ್ಲೇ ಕಠಿಣ ಶಬ್ದಗಳಲ್ಲಿ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದರು. ವಕಾರ್‌ರಿಂದ ಕ್ಷಮೆಯಾಚನೆಯನ್ನು ಬಯಸುತ್ತಿದ್ದೇನೆ ಎಂದು ಹರ್ಷಾ ಹೇಳಿದ್ದರು.

- Advertisement -

ಟ್ವಿಟರ್ ಖಾತೆಯಲ್ಲಿ ಕ್ಷಮೆಯಾಚಿಸಿರುವ ವಕಾರ್ ಯೂನಸ್, “ಪಾಕಿಸ್ತಾನ ತಂಡ ಗೆದ್ದ ಸಂಭ್ರಮದಲ್ಲಿ ನಾನು ಆ ಹೇಳಿಕೆ ನೀಡಿದ್ದೆ. ನನ್ನ ಉದ್ದೇಶ ಅದಾಗಿರಲಿಲ್ಲ.‌ ನನ್ನ ಮಾತು ಹಲವರ ಭಾವನೆಗಳಿಗೆ ನೋವುಂಟು ಮಾಡಿದೆ. ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ, ಇದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ, ಇದು ನಿಜವಾಗಿಯೂ ತಪ್ಪು. ಕ್ರೀಡೆಯು ಜನಾಂಗ, ಬಣ್ಣ ಅಥವಾ ಧರ್ಮವನ್ನು ಲೆಕ್ಕಿಸದೆ ಜನರನ್ನು ಒಂದುಗೂಡಿಸುತ್ತದೆ” ಎಂದು ವಕಾರ್‌ ಟ್ವೀಟ್‌ ಮಾಡಿದ್ದಾರೆ.

ಭಾರತ-ಪಾಕಿಸ್ತಾನ ಪಂದ್ಯದ ಪವರ್-ಪ್ಲೇ ಬಳಿಕದ ವಿರಾಮದ ಸಮಯದಲ್ಲಿ ರಿಜ್ವಾನ್ ಪ್ರಾರ್ಥನೆ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Join Whatsapp