ಲೇಖಕಿ ಶ್ರೀಕಲಾ ಪಿ. ವಿಜಯನ್ ಗೆ ಶ್ರೇಷ್ಠ ಭಾರತದ ‘ಸ್ವಾತಂತ್ರೋತ್ಸವ ಸಾಹಿತ್ಯ ಪ್ರಶಸ್ತಿ’ಯ ಗರಿ

Prasthutha|

ಬೆಂಗಳೂರು: ವಿಶ್ವ ಶ್ರೇಷ್ಠ ಲೇಖಕರ ವೇದಿಕೆ ಮತ್ತು ಗುಜರಾತ್ ಸಾಹಿತ್ಯ ಅಕಾಡೆಮಿಯ ಅಮೃತ್ ಕಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಶ್ರೇಷ್ಠ ಭಾರತದ ‘ಸ್ವಾತಂತ್ರೋತ್ಸವ ಸಾಹಿತ್ಯ ಪ್ರಶಸ್ತಿ’ ಗೆ ಬೆಂಗಳೂರಿನ ಲೇಖಕಿ, ಅಧ್ಯಾಪಕಿ ಶ್ರೀಕಲಾ ಪಿ.ವಿಜಯನ್ ಭಾಜನರಾಗಿದ್ದಾರೆ.


ಶಿಕ್ಷಣ ತಜ್ಞೆ ಶ್ರೀಕಲಾ ಪಿ.ವಿಜಯನ್ ಅವರ ಸಮಗ್ರ ಸಾಹಿತ್ಯ ಕೃಷಿಗೆ ಈ ಪ್ರಶಸ್ತಿ ಒಲಿದಿದೆ. ವಿಶ್ವದ ಒಟ್ಟು 82 ದೇಶಗಳ 440 ಜಾಗತಿಕ ಲೇಖಕರನ್ನೊಳಗೊಂಡ ವೇದಿಕೆಯು ಬೆಂಗಳೂರಿನ ಶ್ರೀಕಲಾ ಪಿ.ವಿಜಯನ್ ಅವರ ದೇಶ ಮನ್ನಣೆಯ, ಶ್ರೇಷ್ಠ ಮಟ್ಟದ ಅತ್ಯುತ್ತಮ ಬರಹಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಿದೆ.

- Advertisement -


ಗುಜರಾತಿನ ಅಹಮದಾಬಾದ್ ನಿಂದ ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ಒಟ್ಟು 160ಕ್ಕೂ ಹೆಚ್ಚು ದೇಶಗಳ ಲೇಖಕರು ಭಾಗವಹಿಸಿದ್ದರು. ಅದರಲ್ಲಿ ಬೆಂಗಳೂರಿನ ಲೇಖಕಿ ಶ್ರೀಕಲಾ ಕೂಡ ಒಬ್ಬರು. ಇತ್ತೀಚೆಗಷ್ಟೇ ಶ್ರೀಕಲಾ ಅವರಿಗೆ ಗುಜರಾತ್ ಸಾಹಿತ್ಯ ಅಕಾಡೆಮಿಯು ಕೊಡಮಾಡಿದ ಪ್ರತಿಷ್ಠಿತ ‘ಗೋಲ್ಡನ್ ಬ್ಯಾಡ್ಜ್’ ಪ್ರಶಸ್ತಿ ಕೂಡ ಲಭಿಸಿತು.
ಕವಿ ಶ್ರೀಕಲಾ ಅವರ ‘ಸೋಲ್ ಇನ್ ಹೋಲ್’ ಎಂಬ ಕವನ ಸಂಕಲನ ದೇಶ-ವಿದೇಶಗಳಲ್ಲಿ ಸಾಕಷ್ಟು ಹೆಸರು ಮಾಡಿದೆ. ಅವರ ಮತ್ತೊಂದು ಕವನ ಸಂಕಲನ “ಕಾಮುಕ ಸಂಗೀತ” ಇನ್ನೇನು ಪೂರ್ಣಗೊಳ್ಳುವ ಹಂತದಲ್ಲಿದ್ದು, ಬರುವ ತಿಂಗಳು ಸೆಪ್ಟೆಂಬರ್ ಅಂತ್ಯದ ವೇಳೆಗೆ ಲೋಕಾರ್ಪಣೆಗೊಳ್ಳುವ ಸಾಧ್ಯತೆ ಇದೆ.

- Advertisement -