ಫೇಸ್ಬುಕ್, ಟ್ವಿಟ್ಟರ್, ಗೂಗಲ್ ಸಿಇಒಗಳಿಗೆ ಅಮೆರಿಕಾದ ಸೆನೆಟ್ ಸಮಿತಿ ಸಮನ್ಸ್ ಕಳುಹಿಸಿರುವುದೇಕೆ?

Prasthutha|

1996ರ ಸಂವಹನ ಸಭ್ಯತೆ ಕಾಯ್ದೆಯಿಂದ ವಿಧಿಯೊಂದನ್ನು ರದ್ದುಗೊಳಿಸಬೇಕೆ ಎಂಬ ಕುರಿತು ಉತ್ತರಿಸಲು ಟ್ವಿಟ್ಟರ್, ಫೇಸ್ಬುಕ್ ಮತ್ತು ಆಲ್ಫಾಬೆಟ್ ಇಂಕ್ ನ ಸಿಇಒ ಗಳು ಶುಕ್ರವಾರದಂದು ಅಮೆರಿಕಾದ ವಾಣಿಜ್ಯ, ವಿಜ್ನಾನ ಮತ್ತು ಸಾರಿಗೆಗೆ ಸಂಬಂಧಿಸಿದ  ಸೆನೆಟ್ ಸಮಿತಿಯ ಮುಂದೆ ಹಾಜರಾಗಲಿದ್ದಾರೆ. ತಮ್ಮ ಪ್ಲಾಟ್ ಫಾರ್ಮ್ ಮೇಲೆ ಬಳಕೆದಾರರು ಪೋಸ್ಟ್ ಮಾಡುವ ಬರಹಗಳಿಗೆ ಹೊಣೆಗಾರರಾಗುವುದರಿಂದ ಈ ಕಾನೂನು ಅವರನ್ನು ರಕ್ಷಿಸುತ್ತದೆ.

- Advertisement -

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ಆನ್ ಲೈನ್ ಹಸ್ತಕ್ಷೇಪ ಮತ್ತು ತಪ್ಪುಮಾಹಿತಿಗಳ ವರದಿಗಳು ಬಂದಿರುವುದರಿಂದ ಫೇಸ್ಬುಕ್ ನ ಮಾರ್ಕ್ ಝಕರ್ಬರ್ಗ್, ಟ್ವಿಟ್ಟರ್ ನ ಜಾಕ್ ಡೋರ್ಸಿ ಮತ್ತು ಅಲ್ಫಾಬೆಟ್ ನ ಸುಂದರ್ ಪಿಚೈ ಉತ್ತರಿಸಬೇಕಾಗಿದೆ.

ಸಂವಹನ ಸಭ್ಯತೆ ಕಾಯ್ದೆ – 1996 ಕಾಯ್ದೆಯ 230ನೆ ವಿಧಿಯನ್ನು ಬದಲಾಯಿಸಲು ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ನ ಪ್ರತಿನಿಧಿಗಳು ಬಯಸುತ್ತಿದ್ದಾರೆ. ಈ ವಿಧಿಯ ಪ್ರಕಾರ ಸಂವಾದಾತ್ಮಕ ಕಂಪ್ಯೂಟರ್ ಸೇವೆಯ ಯಾವುದೇ ಪೂರೈಕೆದಾರ ಅಥವಾ ಬಳಕೆದಾರ ಇನ್ನೋರ್ವ ಮಾಹಿತಿ ಬರಹ ಪೂರೈಕೆದಾರನ ಯಾವುದೇ ಮಾಹಿತಿಯ ಪ್ರಸಾರಕ ಅಥವಾ ವಕ್ತಾರನಾಗಿ ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

- Advertisement -

ಸರಳ ಅರ್ಥದಲ್ಲಿ ಹೇಳುವುದಾದರೆ ತಮ್ಮ ಪ್ಲಾಟ್ ಫಾರಂ ಮೇಲೆ ಪೋಸ್ಟ್ ಮಾಡುವ ಯಾವುದೇ ಬರಹ, ಫೋಟೊ ಅಥವಾ ವೀಡಿಯೊಗಳಿಗೆ ಅವರು ಕಾನೂನಾತ್ಮಕವಾಗಿ ಜವಾಬ್ದಾರರಲ್ಲ. 1996ರಲ್ಲಿ ಈ ಕಾನೂನು ಅಂಗೀಕಾರಗೊಳ್ಳುವಾಗ ಸೋಶಿಯಲ್ ಮೀಡಿಯಾ ಅಸ್ತಿತ್ವದಲ್ಲಿರಲಿಲ್ಲ. ಆದರೆ ಕಾನೂನು ಬ್ಲಾಗರ್ ಗಳಿಂದ ಇಂಟರ್ ನೆಟ್ ಪೂರೈಕೆದಾರರನ್ನು ರಕ್ಷಿಸುತ್ತಿತ್ತು ಮತ್ತು ಬ್ಲಾಗರ್ ಗಳಿಗೆ ಬರುವ ಕಮೆಂಟ್ ಗಳಿಗಾಗಿ ಬ್ಲಾಗರ್ ಗಳನ್ನು ಹೊಣೆಯಾಗಿಸುವುದರಿಂದಲೂ ಅದು ತಪ್ಪಿಸುತ್ತಿತ್ತು.

ಈ ವಿಧಿಯನ್ನು ರದ್ದುಗೊಳಿಸಲು ಬಯಸುವವರು ತಮ್ಮ ಸೈಟ್ ಗಳಲ್ಲಿ ಬಳಕೆದಾರರು ಪೋಸ್ಟ್ ಮಾಡುವ ಎಲ್ಲಾ ಟ್ವೀಟ್, ಪೋಸ್ಟ್ ಮತ್ತು ವಿಮರ್ಶೆ ಗಳಿಗೆ ಈ ಟೆಕ್ ಕಂಪೆನಿಗಳನ್ನು ಕಾನೂನಾತ್ಮಕವಾಗಿ ಹೊಣೆಗಾರರನಾಗಿ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ. ಟ್ರಂಪ್ ಮತ್ತು ಬೈಡನ್ ಇಬ್ಬರೂ 204ನೆ ವಿಧಿಯನ್ನು ಹಿಂದೆಗೆಯಬೇಕೆಂದು ಬಯಸುತ್ತಾರೆ. ಇದನ್ನು ಪ್ರಜಾಪ್ರಭುತ್ವದ ಕೊಲೆ ಎಂಬುದಾಗಿಯೂ ಅಮೆರಿಕಾದಲ್ಲಿ ಹಲವರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ.

Join Whatsapp