‘ಎಟಿಎಸ್ ಸುಳ್ಳು ಆರೋಪದಲ್ಲಿ ಮುಸ್ಲಿಂ ಯುವಕರನ್ನು ಬಂಧಿಸಿದೆ’: ಕುಟುಂಬದ ಆರೋಪ

Prasthutha|

ಬನಾರಸ್ ಜುಲೈ 26: ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹದಳ (ಎಟಿಎಸ್) ನಿಂದ ಬಂಧಿಸಲ್ಪಟ್ಟ ಐದು ಮುಸ್ಲಿಮ್ ಯುವಕರ ಕುಟುಂಬವು ತನಿಖಾ ಸಂಸ್ಥೆಯು ಯುವಕರ ಮಾಡಿದ ಭಯೋತ್ಪಾದನಾ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದೆ. ಅಲ್- ಖೈದಾ ಭಯೋತ್ಪಾದನಾ ಆರೋಪದಲ್ಲಿ ಬಂಧಿಸಿರುವ ಐದು ಯುವಕರ ಮೇಲೆ ಯಾವುದೇ ಸಾಕ್ಷಿಗಳಿಲ್ಲದ ಕಾರಣ ತಕ್ಷಣ ಬಿಡುಗಡೆಗೊಳಿಸುವಂತೆ ಕುಟುಂಬಸ್ಥರು ಸರ್ಕಾರವನ್ನು ಆಗ್ರಹಿಸಿದ್ದಾರೆ.

- Advertisement -

ಸ್ವಾತಂತ್ರ ದಿನಾಚರಣೆಯ ಹಿನ್ನೆಲೆಯಲ್ಲಿ ಮಾನವ ಬಾಂಬ್ ಬಳಕೆ ಸೇರಿದಂತೆ ರಾಜ್ಯದಲ್ಲಿ ಭೀಕರ ಸ್ಪೋಟ, ಭಯೋತ್ಪಾದಕ ದಾಳಿ ನಡೆಸಿದ ಆರೋಪದಲ್ಲಿ ಎಟಿಎಸ್ ಜುಲೈ 11 ರಂದು ಮಿನ್ಹಾಜ್ ಅಹ್ಮದ್, ಮಸೀರುದ್ದೀನ್, ಶಕೀಲ್ ಹುಸೇನ್, ಮೊಹಮ್ಮದ್ ಮುಸ್ತಕೀಮ್, ಮೊಹಮ್ಮದ್ ಮುಯೀದ್ ಅವರನ್ನು ಬಂಧಿಸಿದ್ದು, ಈ ಎಲ್ಲಾ ಆರೋಪಿಗಳು ಎಟಿಎಸ್ ವಶದಲ್ಲಿದ್ದಾರೆ. ಬಂಧಿತ ಎಲ್ಲಾ ಯುವಕರ ಮೇಲೆ ಅಕ್ರಮ ಚಟುವಟಿಕೆ ನಿಯಂತ್ರಣಾ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದಿನಗೂಲಿ ನೌಕರಿಯ ಮೂಲಕ ತಮ್ಮ ಕುಟುಂಬ ಪಾಲನೆಯಲ್ಲಿ ತೊಡಗಿದ್ದವರನ್ನು ವಿಚಾರಣೆ ನಡೆಸಿ ಬಿಡುಗಡೆಗೊಳಿಸುವುದಾಗಿ ಕರೆದುಕೊಂಡು ಹೋದ ಪೊಲೀಸರು ನಂತರ ಅಲ್- ಖೈದಾ ನಂಟು ಹೊರಿಸಿ ಜೈಲಿಗಟ್ಟಿಸಿದ್ದಾರೆ. ಅಲ್-ಖೈದಾ ನಂಟಿನ ಅರೋಪದಲ್ಲಿ ಎಟಿಎಸ್ ನಿಂದ ಬಂಧಿತ 5 ಯುವಕರಿಗೆ ಕಾನೂನು ನೆರವು ನೀಡುವುದಾಗಿ ಜಮೀಅತುಲ್ ಉಲೇಮಾ ಹಿಂದ್, ನಾಗರಿಕ ಹಕ್ಕುಗಳ ಸಂರಕ್ಷಣಾ ಸಮಿತಿ ಸೇರಿದಂತೆ ಹಲವಾರು ಮುಸ್ಲಿಮ್ ಸಂಘಟನೆಗಳು ಘೋಷಿಸಿದೆ.

Join Whatsapp