ಅಸ್ಸಾಂ| ಶಾಸಕ ಜಿಗ್ನೇಶ್ ಮೇವಾನಿ ಬಂಧನ ವಿರೋಧಿಸಿ ಪೊಲೀಸ್ ಠಾಣೆ ಎದುರು ಕಾಂಗ್ರೆಸ್ ನಿಂದ ಪ್ರತಿಭಟನೆ

Prasthutha|

ಗುವಾಹಟಿ: ಪ್ರಧಾನಿ ಮೋದಿ ಅವರನ್ನು ವಿಮರ್ಶಿಸಿ ಟ್ವೀಟ್ ಮಾಡಿದ ಆರೋಪದಲ್ಲಿ ಗುಜರಾತ್ ಶಾಸಕ, ದಲಿತ ಮುಖಂಡ ಜಿಗ್ನೇಶ್ ಮೇವಾನಿ ಬಂಧನವನ್ನು ವಿರೋಧಿಸಿ ಅಸ್ಸಾಮ್ ಪ್ರದೇಶ ಕಾಂಗ್ರೆಸ್ ಸಮಿತಿ, ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದೆ.

- Advertisement -

ಮೋದಿ ಅವರು ಗೋಡ್ಸೆಯನ್ನು ದೇವರೆಂದು ಪರಿಗಣಿಸಿದ್ದಾರೆ ಎಂದು ಶಾಸಕ ಮೇವಾನಿ ಇತ್ತೀಚೆಗೆ ಟ್ವೀಟ್ ಮಾಡಿದ್ದ ಹಿನ್ನೆಲೆಯಲ್ಲಿ ಅಸ್ಸಾಮ್ ಬಿಜೆಪಿ ನಾಯಕರೊಬ್ಬರು ನೀಡಿದ ದೂರಿನ ಆಧಾರದಲ್ಲಿ ಗುಜರಾತ್’ನ ಬನಸ್ಕಾಂತ ಜಿಲ್ಲೆಯಿಂದ ಅಸ್ಸಾಮ್ ಪೊಲೀಸರು ಶಾಸಕರನ್ನು ಬಂಧಿಸಿದ್ದರು.

ಈ ಮಧ್ಯೆ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದ್ದು, ಕೊಕ್ರಜಾರ್ ನ್ಯಾಯಾಲಯ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ರಿಮಾಂಡ್ ಅವಧಿ ಮುಗಿದ ಬಳಿಕ ಮೇವಾನಿ ಅವರನ್ನು ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದೆಂದು ತಿಳಿದುಬಂದಿದೆ.

- Advertisement -

ಪ್ರತಿಭಟನೆಯಲ್ಲಿ ಎಪಿಸಿಸಿ ಪ್ರಧಾನ ಕಾರ್ಯದರ್ಶಿ ಅಪೂರ್ವ ಭಟ್ಟಾಚಾರ್ಯ, ಶಿವಸಾಗರ ಶಾಸಕ ಅಖಿಲ್ ಗೊಗೊಯ್ ಸೇರಿದಂತೆ ಕೊಕ್ರಜಾರ್, ಧುಬ್ರಿ ಚಿರಾಂಗ್ ಮತ್ತು ಬೊಂಗೈಗಾಂವ್ ಜಿಲ್ಲೆಗಳ ಹಲವು ಹಿರಿಯ ನಾಯಕರು ಭಾಗವಹಿಸಿದ್ದರು.

ಸಿಪಿಐಎಂ (ಎಂ) ಶಾಸಕ ಮನೋರಂಜನ್ ತಾಲೂಕ್ದಾರ್ ಮತ್ತು ಇತರ ಎಡ ಪಕ್ಷದ ನಾಯಕರು ಕೂಡ ಜಿಗ್ನೇಶ್ ಮೇವಾನಿ ಅವರನ್ನು ಭೇಟಿ ಮಾಡಲು ಪ್ರಯತ್ನಿಸಲಾಯಿತ್ತಾದರೂ ಕೂಡ ಪೊಲೀಸರು ಭೇಟಿ ಮಾಡಲು ನಿರಾಕರಿಸಲಾಯಿತು.

ಅಸ್ಸಾಂ ಪೊಲೀಸರು ಮೇವಾನಿ ಅವರನ್ನು ಸುಳ್ಳು ಪ್ರಕರಣದ ಆಧಾರದಲ್ಲಿ ಬಂಧಿಸಿರುವುದನ್ನು ಸಿಪಿಐ(ಎಂ) ಬಲವಾಗಿ ಖಂಡಿಸುತ್ತದೆ ಮತ್ತು ಅವರನ್ನು ತಕ್ಷಣ ಬಿಡುಗಡೆ ಮಾಡಲು ಒತ್ತಾಯಿಸಿದೆ.

Join Whatsapp