ದುಬೈನಲ್ಲಿ 9 ದಿನಗಳ ಈದ್ ಅಲ್ ಫಿತ್ರ್ ವಿರಾಮ ಘೋಷಣೆ

Prasthutha|

ಯುಎಇ: ದುಬೈ ಸರ್ಕಾರವು ಫೆಡರಲ್ ಸರ್ಕಾರಿ ಸಿಬ್ಬಂದಿಗೆ ಒಂಬತ್ತು ದಿನಗಳ ಈದ್ ಅಲ್ ಫಿತ್ರ್ ರಜೆ ಘೋಷಿಸಿದೆ.

- Advertisement -

ಏಪ್ರಿಲ್ 30ರ ಶನಿವಾರದಿಂದ ಮೇ 8ರ ಭಾನುವಾರದವರೆಗೆ ವಿರಾಮ ಇರಲಿದೆ ಎಂದು ದುಬೈ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ತಿಳಿಸಿದೆ. ಮೇ 9ರ ಸೋಮವಾರದಿಂದ ಅಧಿಕೃತ ಕೆಲಸದ ಅವಧಿ ಪುನಾರಂಭಗೊಳ್ಳಲಿದೆ.

ಇಸ್ಲಾಮಿಕ್ ಹಬ್ಬವನ್ನು ಆಚರಿಸಲು ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಒಂಬತ್ತು ದಿನಗಳ ವಿರಾಮ ನೀಡಲಾಗುವುದು ಎಂದು ಶಾರ್ಜಾ ಇತ್ತೀಚೆಗೆ ಘೋಷಿಸಿತ್ತು. ಏಪ್ರಿಲ್ 30ರ ಶನಿವಾರದಿಂದ ಮೇ 5ರ ಗುರುವಾರದವರೆಗೆ ವಿರಾಮ ಇರಲಿದೆ ಎಂದು ಶಾರ್ಜಾದ ಮಾನವ ಸಂಪನ್ಮೂಲ ಇಲಾಖೆ ತಿಳಿಸಿದೆ. ಶಾರ್ಜಾದಲ್ಲಿ ಶುಕ್ರವಾರ-ಶನಿವಾರ-ಭಾನುವಾರ ವಾರಾಂತ್ಯದೊಂದಿಗೆ, ನಿವಾಸಿಗಳು ಒಂಬತ್ತು ದಿನಗಳ ಕಾಲ ರಜೆಯಲ್ಲಿರುತ್ತಾರೆ ಎಂದು ತಿಳಿದು ಬಂದಿದೆ

Join Whatsapp