ಏಷ್ಯಾ ಸ್ಕ್ವಾಶ್ ಚಾಂಪಿಯನ್‌ ಶಿಪ್‌ : ಭಾರತಕ್ಕೆ ಚಿನ್ನ

Prasthutha|

ದಕ್ಷಿಣ ಕೊರಿಯಾದದಲ್ಲಿ ನಡೆದ ಏಷ್ಯಾ ಸ್ಕ್ವಾಶ್ ಚಾಂಪಿಯನ್‌ ಶಿಪ್‌ನ ಫೈನಲ್‌ನಲ್ಲಿ ಕುವೈತನ್ನು ಮಣಿಸಿದ ಭಾರತದ ಪುರುಷರ ತಂಡವು ಚಿನ್ನ ಗೆದ್ದಿತು. ಹಿಂದಿನೆರಡು ಬಾರಿ ಬೆಳ್ಳಿ ಗೆದ್ದಿದ್ದ ಭಾರತಕ್ಕೆ ಇದು ಮೊದಲ ಚಾರಿತ್ರಿಕ ಬಂಗಾರವಾಗಿದೆ.

- Advertisement -

ಫೈನಲ್‌ ನಲ್ಲಿ ನಾಯಕ ಸೌರವ್ ಘೋಷಾಲ್ ಮತ್ತು ರಮಿತ್ ಟಂಡನ್ ಗೆದ್ದು ಫಲಿತಾಂಶ ನಿರ್ಣಯವಾದುದರಿಂದ ಅಭಯ ಸಿಂಗ್ ಆಡಬೇಕಿದ್ದ ಮೂರನೇ ಪಂದ್ಯ ರದ್ದುಪಡಿಸಲಾಯಿತು.

ಸೆಮಿಫೈನಲ್‌ ನಲ್ಲಿ ಭಾರತವು ಮಲೇಶಿಯಾ ವಿರುದ್ಧ 2-1 ರಿಂದ ಜಯಿಸಿತು.

- Advertisement -

ಇದೇ ವೇಳೆ ಮಹಿಳಾ ವಿಭಾಗದಲ್ಲಿ ಭಾರತದ ಮಹಿಳಾ ಸ್ಕ್ವಾಶ್ ತಂಡವು ಸೆಮಿಫೈನಲ್ ನಲ್ಲಿ 1-2 ರಿಂದ ಮಲೇಷ್ಯಾ ಎದುರು ಸೋತು ಕಂಚು ತನ್ನದಾಗಿಸಿಕೊಂಡಿತು.

Join Whatsapp