ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಾಹನ ಸಮರ್ಪಿಸಿದ ಆಶಾಭಾರತಿ ಎಸೋಸಿಯೇಟ್ಸ್ ಆಡಳಿತ ಪಾಲುದಾರ ಹರ್ಷಿತ್ ಜಿ.ಬಿ

Prasthutha|

ಗುತ್ತಿಗಾರು ಆಶಾಭಾರತಿ ಎಸೋಸಿಯೇಟ್ಸ್ ಆಡಳಿತ ಪಾಲುದಾರರಾದ ಹರ್ಷಿತ್ ಜಿ.ಬಿ ರವರು ಕೋರೋನಾ ನಿರ್ವಹಣೆ ಕಾರ್ಯಕ್ಕೆ ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಾಹನ ಸಮರ್ಪಿಸಿದರು. ಜನರು ಕೊರೋನಾದಿಂದ ತತ್ತರಿಸುತ್ತಿರುವ ಈ ಸಮಯದಲ್ಲಿ ಇಂತಹಾ ಮಹತ್ಕಾರ್ಯವು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ವಾಹನ ಹಸ್ತಾಂತರಿಸುವ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾದಿಕಾರಿ ಡಾ.ಚೈತ್ರ ಭಾನು ,ಗ್ರಾ.ಪಂ ಸದ್ಯರುಗಳಾದ ಮಾಯಿಲಪ್ಪ ಕೊಂಬೊಟ್ಟು ,ವಸಂತ ಮೊಗ್ರ ,ಲತಾಕುಮಾರಿ ಅಜಡ್ಕ ,ಹಾಗೂ ಪರಮೇಶ್ವರ ಕೆಂಬಾರೆ ,ಪರಮೇಶ್ವರ ಚನಿಲ ,ಲೋಹಿತ್  ಪಾರೆಪ್ಪಾಡಿ ,ಗುರುವ ಆಚಳ್ಳಿ ,ಸುರೇಶ್ ಚತ್ರಪ್ಪಾಡಿ ,ಧನಂಜಯ ಗೊರಗೊಡಿ ಮತ್ತು  ಗುತ್ತಿಗಾರು ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.

- Advertisement -