5ಜಿ ಕೇಸ್‌ ವಜಾ | ನಟಿ ಜೂಹಿ ಚಾವ್ಲಾ ಸಹಿತ ಅರ್ಜಿದಾರರಿಗೆ 20 ಲಕ್ಷ ರೂ. ದಂಡ

Prasthutha|

ನವದೆಹಲಿ : ಭಾರತದಲ್ಲಿ 5ಜಿ ತಂತ್ರಜ್ಞಾನ ಬಳಕೆಗೆ ಸಂಬಂಧಿಸಿ ನಟಿ ಜೂಹಿ ಚಾವ್ಲಾ ಮತ್ತು ಇತರ ಇಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ದೆಹಲಿ ಹೈಕೋರ್ಟ್‌, 20 ಲಕ್ಷ ರೂ. ದಂಡವನ್ನೂ ವಿಧಿಸಿದೆ.

- Advertisement -

ವಾದ-ವಿವಾದಗಳನ್ನು ಆಲಿಸಿದ ಬಳಿಕ ಬುಧವಾರ ತೀರ್ಪನ್ನು ಕಾದಿರಿಸಲಾಗಿತ್ತು. ತಾಂತ್ರಿಕ ಆಧಾರದಲ್ಲಿ ಅರ್ಜಿ ವಜಾ ಮಾಡಲಾಗಿದೆ ಮತ್ತು ಅರ್ಜಿ ಲೋಪಯುಕ್ತವಾಗಿದೆ ಎಂದು ನ್ಯಾ. ಜಗಜೀವನ್‌ ರಾಮ್‌ ಮಿಧಾ ಹೇಳಿದ್ದಾರೆ. ಈ ಅರ್ಜಿ ಪ್ರಚಾರಕ್ಕಾಗಿ ಸಲ್ಲಿಸಿದ ಅರ್ಜಿಯಾಗಿದೆ ಎಂದು ಕೋರ್ಟ್‌ ಅಭಿಪ್ರಾಯ ಪಟ್ಟಿದೆ.

ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಆನ್‌ಲೈನ್‌ ವೆಬ್‌ ಲಿಂಕ್‌ ವಿಚಾರಣೆ ವೇಳೆ ಅಪರಿಚಿತರು ಜನರಿಂದ ಮೂವರು ಅಡಚಣೆಯಾಗಿದ್ದು, ವಿಚಾರಣೆಗೆ ಅಡ್ಡಿಪಡಿಸಿದವರನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ಕೋರ್ಟ್‌ ಸೂಚಿಸಿದೆ. ಕಾನೂನು ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಅರ್ಜಿದಾರರಿಗೆ 20 ಲಕ್ಷ ರೂ. ದಂಡ ವಿಧಿಸಿದೆ.

Join Whatsapp