ಕಾಮನ್ವೆಲ್ತ್ ಕರಾಟೆ ಚಾಂಪಿಯನ್ ಶಿಪ್ ಗೆ ಅರುಣ್ ಮಾಚಯ್ಯ ಆಯ್ಕೆ

Prasthutha|

ಪೊನ್ನಂಪೇಟೆ: ಮುಂದಿನ ಸೆಪ್ಟೆಂಬರ್ 26 ರಿಂದ ಲಂಡನಿನ ಬರ್ಮಿಂಗ್ಹ್ಯಾಮ್ ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕರಾಟೆ ಚಾಂಪಿಯನ್ ಶಿಪ್ ಗೆ ಭಾರತ ತಂಡವನ್ನು ಪ್ರತಿನಿಧಿಸಲು ಹಿರಿಯ ಕರಾಟೆಪಟು ಮತ್ತು ಮಾಜಿ ಶಾಸಕ ಸಿ. ಎಸ್. ಅರುಣ್ ಮಾಚಯ್ಯ ಆಯ್ಕೆಗೊಂಡಿದ್ದಾರೆ.

- Advertisement -

ದಕ್ಷಿಣ ಭಾರತ ಕರಾಟೆ ಫೆಡರೇಷನ್ ಅಧ್ಯಕ್ಷರು, ಕರಾಟೆ ಇಂಡಿಯಾ ಆರ್ಗನೈಜೇಷನ್ ಹಿರಿಯ ಉಪಾಧ್ಯಕ್ಷರು ಹಾಗೂ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಸಿ.ಎಸ್. ಅರುಣ್ ಮಾಚಯ್ಯ ಅವರು ಈ ಹಿಂದೆ ವಿಶ್ವದ ಹಲವೆಡೆ ನಡೆದ ಹಲವಾರು ಅಂತರರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

ಕರಾಟೆ ಇಂಡಿಯಾ ಆರ್ಗನೈಸೇಶನ್ ವತಿಯಿಂದ ಅಭಿನಂದನೆ:

- Advertisement -

ಕಾಮನ್ವೆಲ್ತ್ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುವ ಅರುಣ್ ಮಾಚಯ್ಯ ಅವರನ್ನು ಅಭಿನಂದಿಸಿ ಬೀಳ್ಕೊಡಲಾಯಿತು.

ಅರುಣ್ ಮಾಚಯ್ಯ ಅವರನ್ನು ಅಭಿನಂದಿಸಿದ ಸಂದರ್ಭದಲ್ಲಿ ಕರಾಟೆ ಇಂಡಿಯಾ ಆರ್ಗನೈಸೇಶನ್ ಅಧ್ಯಕ್ಷರಾದ ಸಂಜೀವ್ ಕುಮಾರ್ ಜಾಗ್ರ, ವಿಶ್ವ ಕರಾಟೆ ಮಂಡಳಿಯ ತಾಂತ್ರಿಕ ಆಯೋಗದ ಸದಸ್ಯ ಭರತ್ ಶರ್ಮ, ಮಹಾರಾಷ್ಟ್ರ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಸಲಾಹುದ್ದೀನ್ ಅನ್ಸಾರಿ, ಮಹಾರಾಷ್ಟ್ರ ಕರಾಟೆ ಅಸೋಸಿಯೇಷನ್ ಕಾರ್ಯದರ್ಶಿ ಸಂದೀಪ್ ಘಾಡೆ ಮೊದಲಾದವರು ಉಪಸ್ಥಿತರಿದ್ದರು.

Join Whatsapp