ಬಂಡಾಯ ಶಾಸಕ ತಾನಾಜಿ ಸಾವಂತ್ ಕಚೇರಿ ಧ್ವಂಸಗೊಳಿಸಿದ ಶಿವಸೇನೆ ಕಾರ್ಯಕರ್ತರು

Prasthutha|

ಮುಂಬೈ: ಶಿವಸೇನೆ ಕಾರ್ಯಕರ್ತರು ಸಚಿವ ಏಕನಾಥ್ ಶಿಂಧೆ ಪೋಸ್ಟರ್’ಗೆ ಮೊಟ್ಟೆ, ಮಸಿ ಎರಚಿರುವ ಬೆನ್ನಲ್ಲೇ ಬಂಡಾಯ ಶಾಸಕ ತಾನಾಜಿ ಸಾವಂತ್ ಕಚೇರಿಯನ್ನು ಧ್ವಂಸಗೈದಿದ್ದಾರೆ. ಪುಣೆಯಲ್ಲಿರುವ ಶಾಸಕ ಸಾವಂತ್ ಕಚೇರಿಗೆ ನುಗ್ಗಿರುವ ಕಾರ್ಯಕರ್ತರು ಕಚೇರಿಯನ್ನು ಪುಡಿಗೈಯ್ಯುವ ವೀಡಿಯೋ ದೃಶ್ಯಾವಳಿಗಳು ವೈರಲ್ ಆಗಿವೆ.

- Advertisement -

ಮಹಾ ಸರಕಾರದ ವಿರುದ್ಧ ಬಂಡಾಯವೆದ್ದು ಶಾಸಕರನ್ನು ಒಟ್ಟುಗೂಡಿಸಿರುವ ಸಚಿವ ಏಕನಾಥ್ ಶಿಂಧೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕಾರ್ಯಕರ್ತರು , ಶಿಂಧೆ ಬಣ ಸೇರಿರುವ ಸಾವಂತ್ ವಿರುದ್ಧ ಘೋಷಣೆಗಳನ್ನು ಕೂಗಿ ಕಚೇರಿಗೆ ತೆರಳಿ ಗಾಜುಗಳನ್ನು ಒಡೆಯುವ ದೃಶ್ಯಗಳೂ ಸೆರೆಯಾಗಿದೆ.

ಶಿವಸೇನೆ ಕಾರ್ಯಕರ್ತರು ಸಾವಂತ್ ಕಚೇರಿಯನ್ನು ಧ್ವಂಸಗೈದಿರುವುದರ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆಯ ಪುಣೆ ನಗರ ಮುಖ್ಯಸ್ಥ ಸಂಜಯ್ ಮೋರೆ, ಶಾಸಕ ತಾನಾಜಿ ಸಾವಂತ್ ಕಚೇರಿಯನ್ನು ನಮ್ಮ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ. ಪಕ್ಷದ ಮುಖ್ಯಸ್ಥರಿಗೆ ತೊಂದರೆ ನೀಡಿರುವ ಎಲ್ಲರೂ ಈ ರೀತಿಯ ಕ್ರಮವನ್ನು ಎದುರಿಸಲಿದ್ದಾರೆ. ಅವರ ಕಚೇರಿಗಳೂ ಧ್ವಂಸವಾಗಲಿದೆ ಎಂದು ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ.

Join Whatsapp