ಸುಳ್ಯದಲ್ಲಿ 2.7 ತೀವ್ರತೆಯಲ್ಲಿ ಭೂಕಂಪನ: KSNDMC ಮಾಹಿತಿ

Prasthutha|

ಸುಳ್ಯ: ಇಂದು ಬೆಳಗ್ಗೆ 9:09:48ರ ಸುಮಾರಿಗೆ ದಕ್ಷಿಣ ಕನ್ನಡದ ಸುಳ್ಯದಲ್ಲಿ 2.7 ತೀವ್ರತೆಯಲ್ಲಿ ಭೂಕಂಪನವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.

- Advertisement -

ಸುಳ್ಯ ತಾಲೂಕಿನ ಮರ್ಕಂಜ , ಕೊಡಪ್ಪಾಲ, ಗೂನಡ್ಕ , ಅರಂತೋಡು ಮೊದಲಾದ ಕಡೆಗಳಲ್ಲಿ ಇಂದು ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿತ್ತು.

Join Whatsapp