‘ರೈತರ ಕಷ್ಟವರಿಯದ ಪ್ರಧಾನಿಗೆ ನಮ್ಮ ಶಕ್ತಿ ಏನೆಂದು ತೋರಿಸುತ್ತೇವೆ’ : ಕೃಷಿ ಮಸೂದೆ ವಿರೋಧಿಸಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

Prasthutha|

ಬೆಂಗಳೂರು : ಕೇಂದ್ರ ಸರಕಾರದ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ರಾಜ್ಯದ ರೈತರು ಬೆಂಗಳೂರಿನಲ್ಲಿ ಬೃಹತ್ ಪಾದಯಾತ್ರೆಯ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ. “ಪ್ರಧಾನಿ ನರೇಂದ್ರ ಮೋದಿಗೆ ರೈತರ ಬವಣೆಗಳ ಕುರಿತು ಅರಿವಿಲ್ಲ. ರೈತ ವಿರೋಧಿ ಮಸೂದೆಗಳನ್ನು ಜಾರಿಗೆ ತಂದಿರುವ ಅವರಿಗೆ ನಮ್ಮ ಶಕ್ತಿ ಏನೆಂದು ತೋರಿಸಿ ಕೊಡುತ್ತೇವೆ” ಎಂದು ರೈತ ಸಮೂಹ ತಮ್ಮ ಆಕ್ರೋಶ ವ್ಯಕ್ತಪಡಿಸಿದೆ. ಕೆಲವೊಂದು ಕೃಷಿ ಬೆಳೆಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ಕೈಬಿಡಲಾಗಿದೆ. ಇದು ರೈತರಿಗೆ ಮಾಡುತ್ತಿರುವ ದ್ರೋಹವಾಗಿದೆ ಎಂದವರು ತಮ್ಮ ಅಸಹನೆ ವ್ಯಕ್ತಪಡಿಸಿದ್ದಾರೆ.

- Advertisement -

ಫ್ರೀಡಂ ಪಾರ್ಕಿಗೆ ಪಾದಯಾತ್ರೆಯ ಮೂಲಕ ಪ್ರತಿಭಟನೆಗಾಗಿ ಹೋಗುತ್ತಿದ್ದ ರೈತರನ್ನು ಪೊಲೀಸರು ತಡೆದಾಗ ಆಕ್ರೋಶಗೊಂಡ ಪ್ರತಿಭಟನೆಕಾರರು, ಆನಂದ್ ರಾವ್ ಸರ್ಕಲ್ ನ ಮೇಲ್ಸೇತುವೆಯ ಮೇಲೆಯೇ ಕುಳಿತುಕೊಂಡು ನಾವು ಇಲ್ಲಿಯೇ ಕುಳಿತು ಆಹೋರಾತ್ರಿ ಧರಣಿ ಹಮ್ಮಿಕೊಳ್ಳುತ್ತೇವೆ ಎಂದು ಪಟ್ಟು ಹಿಡಿದು ಕೂತಿದ್ದಾರೆ. ರಾಜ್ಯ ಸರ್ಕಾರದ ಕೃಷಿ ಮಂತ್ರಿ ಬಿ ಸಿ ಪಾಟೀಲ್ ಅವರ ವಿರುದ್ಧವೂ ಪ್ರತಿಭಟನೆಕಾರರು ಘೋಷನೆಗಳನ್ನು ಕೂಗಿದರು

Join Whatsapp