ಮತ್ತೆ ಆಪರೇಷನ್ ಕಮಲ: ನಿತೀಶ್ ಬಣದ ಏಳು ಶಾಸಕರಲ್ಲಿ ಐದು ಮಂದಿ ಬಿಜೆಪಿಗೆ!

Prasthutha|

ಗುವಾಹಟಿ: ಮಣಿಪುರದ ಸಂಯುಕ್ತ ಜನತಾದಳದ (ಯುನೈಟೆಡ್) ಏಳು ಶಾಸಕರಲ್ಲಿ ಐವರು ಶುಕ್ರವಾರ ಆಡಳಿತಾರೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

- Advertisement -

ಇದೀಗ ಐವರು ಜೆಡಿಯು ಶಾಸಕರು ಬಿಜೆಪಿಯೊಂದಿಗೆ ವಿಲೀನವಾಗಿದ್ದು, ಪಕ್ಷವು ತನ್ನ ಒಟ್ಟು ಮೊತ್ತದ ಮೂರನೇ ಎರಡು ಭಾಗಕ್ಕಿಂತ ಹೆಚ್ಚು ಶಾಸಕರನ್ನು ಕಳೆದುಕೊಂಡಿದೆ.

ಕೆಎಚ್ ಜೋಯ್ ಕಿಶನ್, ಎನ್ ಸನಾಟೆ, ಮುಹಮ್ಮದ್ ಅಸದುದ್ದೀನ್, ಮಾಜಿ ಡಿಜಿಪಿ ಎಲ್ ಎಂ ಖೌಟೆ ಮತ್ತು ತಂಗ್ಜಾಮ್ ಅರುಣ್ ಕುಮಾರ್ ಅವರು ಬಿಜೆಪಿಗೆ ಸೇರ್ಪಡೆಯಾದ ಶಾಸಕರು.

- Advertisement -

ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿ ಮೈತ್ರಿಯನ್ನು ಕಡಿದುಕೊಂಡ ಮೂರು ವಾರಗಳ ಬಳಿಕ   ಮಣಿಪುರದ 6 ಮಂದಿ ಜೆಡಿಯು ಶಾಸಕರಲ್ಲಿ ಐವರು ಬಿಜೆಪಿಗೆ ಸೇರಿದರು.

ಸಭಾಪತಿ ತೊಕೋಮ್ ಸತ್ಯಬ್ರತ ಸಿಂಗ್ ಅವರು ಬಿಜೆಪಿ ಕಡೆ ಕೂರುವುದಕ್ಕೆ ಹಸಿರು ನಿಶಾನೆ ತೋರಿಸಿ ಅಧಿಕೃತ ಕಚೇರಿ ದಾಖಲೆ ಬರೆಯಿಸಿದ್ದಾರೆ. ಕುಮುಕ್ಚಾಮ್ ಜೊಯ್ ಕಿಶನ್ ಸಿಂಗ್, ಗುರ್ಸಂಗ್ಲುರ್ ಸನಾಟೆ, ಮುಹ್ಮದ್ ಅಸದುದ್ದೀನ್, ತಂಗ್ಜಮ್ ಅರುಣ್ ಕುಮಾರ್, ಮತ್ತು ಎಲ್. ಎಂ. ಕೌಟೆ ಬಿಜೆಪಿಗೆ ಸೇರಿದವರು.

ಬಿಜೆಪಿ ನಾಯಕ ಮತ್ತು ಮುಖ್ಯಮಂತ್ರಿ ಎನ್. ಬೀರೇನ್ ಸಿಂಗ್ ಅವರು ಗುರುವಾರ ದೆಹಲಿಗೆ ಹೋಗಿದ್ದರು. ಐದು ಜನ ಪಕ್ಷಾಂತರದ ಜೆಡಿಯು ಶಾಸಕರು ಶುಕ್ರವಾರ ಬಿಹಾರಕ್ಕೆ ಹೋಗಿದ್ದರು. ಶನಿವಾರ ಮತ್ತು ಭಾನುವಾರ ಪಾಟ್ನಾದಲ್ಲಿ ನಡೆಯುತ್ತಿರುವ ಜೆಡಿಯು ಕಾರ್ಯಕಾರಿ ಸಮಾವೇಶದಲ್ಲಿ ಈ ಐವರು ಭಾಗವಹಿಸುತ್ತಿದ್ದಾರೆ ಎಂದು ರಾಜ್ಯ ಜೆಡಿಯು ಅಧ್ಯಕ್ಷ ಬೀರೇನ್ ಹೇಳಿದ್ದಾರೆ.

ಆರನೆಯ ಶಾಸಕ ಅಬ್ದುಲ್ ನಾಸಿರ್ ಸಹ ನಮ್ಮ ಪಕ್ಷ ಸೇರುತ್ತಾರೆ ಎಂದು ಬಿಜೆಪಿ ಹೇಳಿಕೆ ನೀಡಿದೆ. ಲಿಲೋಂಗ್ ನ ಶಾಸಕರಾದ ಅವರು ಸದ್ಯ ರಾಜ್ಯದಿಂದ ಹೊರಗಿದ್ದಾರೆ.

ಪಾಟ್ನಾದಲ್ಲಿ ಸದರಿ ಶಾಸಕರು ಜೆಡಿಯು ಪಕ್ಷದ ರಾಷ್ಟ್ರೀಯ ನಾಯಕರ ಜೊತೆ ಪ್ರತ್ಯೇಕವಾಗಿ ಮಾತನಾಡುವರು ಎಂದು ಕ್ಷ ಬೀರೇನ್ ಹೇಳಿದ್ದಾರೆ. ಜೆಡಿಯುನ ರಾಷ್ಟ್ರೀಯ ನಾಯಕರು ಮಣಿಪುರದಲ್ಲಿ ಬಿಜೆಪಿ ಮೈತ್ರಿ ಸರಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆಯಲು ಹೇಳಬಹುದು ಎನ್ನಲಾಗಿದೆ.

ಮಣಿಪುರದಲ್ಲಿ ಬಿಜೆಪಿ 37 ಮತ್ತು ಎನ್ ಪಿಪಿ 7 ಹಾಗೂ ಜೆಡಿಯು 6 ಶಾಸಕರನ್ನು ಹೊಂದಿದ್ದು ಮೈತ್ರಿ ಸರಕಾರ ನಡೆಸುತ್ತಿವೆ. 

Join Whatsapp