ಉಕ್ರೇನ್ ನಲ್ಲಿ ಭಾರತದ ಇನ್ನೊಬ್ಬ ವಿದ್ಯಾರ್ಥಿ ಮೃತ್ಯು !

Prasthutha|

ಉಕ್ರೇನ್ ​ನಲ್ಲಿ ಭಾರತದ ಇನ್ನೊಬ್ಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

- Advertisement -

ಪಂಜಾಬ್​​ ಮೂಲದ ಚಂದನ್ ಜಿಂದಾಲ್ (22) ಮೃತ ಯುವಕ ಎಂದು ಗುರುತಿಸಲಾಗಿದೆ.

ಈತ ಉಕ್ರೇನ್ ನ ಲ್ಲಿರುವ ವಿನ್ನಿಟ್ಸಿಯಾ ಮೆಮೋರಿಯಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ಕೋರ್ಸ್​ ಮಾಡುತ್ತಿದ್ದ.

- Advertisement -

ಪಂಜಾಬ್​ನ ಬರ್ನಾಲಾದವರಾದ ಚಂದನ್​ ಜಿಂದಾಲ್​ಗೆ ಪಾರ್ಶವಾಯು ಉಂಟಾಗಿ ಅವರನ್ನು ವಿನ್ನಿಟ್ಸಿಯಾದ ಆಸ್ಪತ್ರೆಯ ತುರ್ತುಘಟಕಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.  ಅವರ ಕುಟುಂಬಕ್ಕೂ ಈಗಾಗಲೇ ವಿಷಯ ತಿಳಿಸಲಾಗಿದ್ದು, ಚಂದನ್ ಮೃತದೇಹವನ್ನು ವಾಪಸ್​ ತರಲು ಸಹಾಯ ಮಾಡುವಂತೆ ಅವರ ತಂದೆ, ಕೇಂದ್ರ ಸರ್ಕಾರಕ್ಕೆ ಲಿಖಿತ ಮನವಿ ಸಲ್ಲಿಸಿದ್ದಾರೆ.

Join Whatsapp