ಫರಂಗಿಪೇಟೆ: ಪುದು ಮಾಪ್ಲ ಶಾಲೆಯ ಹಳೇ ವಿದ್ಯಾರ್ಥಿಗಳಿಂದ ಶಿಕ್ಷಕಿಗೆ ಸನ್ಮಾನ

Prasthutha|

ಫರಂಗಿಪೇಟೆ: ಪುದು ಮಾಪ್ಲ ಶಾಲೆ ಫರಂಗಿಪೇಟೆ ಇದರ 1995-96 ನೇ ಸಾಲಿನ ಹಳೇ ವಿದ್ಯಾರ್ಥಿಗಳಿಂದ ನಿವೃತ್ತ ಶಿಕ್ಷಕಿ ವಂದನಾ ಅವರಿಗೆ ಸನ್ಮಾನ ಕಾರ್ಯಕ್ರಮ ಶಾಲೆಯ ಸಭಾಂಗಣದಲ್ಲಿ ಬುಧವಾರ ನಡೆಯಿತು.

- Advertisement -

 ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ವಂದನಾ, 26 ವರ್ಷಗಳ ಹಿಂದೆ ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿ ವಿದ್ಯೆ ಕಳಿಸಿದ ಶಿಕ್ಷಕಿಯನ್ನು ಅತ್ಯಂತ ಗೌರವದಿಂದ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಂಡ ನನ್ನ ಹಳೇ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಸಲ್ಲಿಸುತ್ತಿದ್ದೇನೆ ಎಂದರು.

 ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಝೀರ್ ಅಮೆಮಾರ್, ಉಪಾಧ್ಯಕ್ಷ ಬದ್ರುದ್ದೀನ್ ಬಿ ಕೆ, ಕಾರ್ಯದರ್ಶಿ ದಾವೂದ್ ಐಫಾ, ಜೊತೆ ಕಾರ್ಯದರ್ಶಿ ಶರೀಫ್, ಕೋಶಾಧಿಕಾರಿ ಫಾರೂಕು ಪಾವೂರು ಸದಸ್ಯರಾದ ಇಮ್ತಿಯಾಝ್ ಲತೀಫ್, ಕಬೀರ್, ಇಕ್ಬಾಲ್, ರಾಜ ಫಾರೂಕು, ರಶೀದ್ ಸುಜೀರ್, ಶಬೀರ್ ಹತ್ತನೇ ಮೈಲ್ ಕಲ್ಲು, ಲತೀಫ್ ಪಾವೂರು, ಸಿದ್ದೀಕ್ ಕುಂಪನಮಜಲ್, ಮೊಹಿದ್ದೀನ್ ಕುಂಪನಮಜಲ್, ಇರ್ಫಾನ್ ಇಬಿಆರ್, ಶಫೀಕ್ ಕುಂಪನಮಜಲ್, ಇಕ್ಬಾಲ್ ಆಥಾಯಿ ಹಾಗೂ ಮತ್ತಿತರರು ಹಳೇ ವಿದ್ಯಾರ್ಥಿ ಸಂಘದ ಪ್ರಮುಖರು ಸಹಕರಿಸಿದರು ಕಾದರ್ ಅಮೆಮಾರ್ ಸ್ವಾಗತಿಸಿ ನಿರೂಪಿಸಿದರು. ಮುಖ್ಯ ಶಿಕ್ಷಕಿಯ ಬೇಡಿಕೆಯಂತೆ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಹತ್ತು ಪ್ಲಾಸ್ಟಿಕ್ ಕುರ್ಚಿಯನ್ನು ಈ ಸಂದರ್ಭದಲ್ಲಿ ದೇಣಿಗೆ ನೀಡಲಾಯಿತು

Join Whatsapp