ಮತ್ತೊಂದು ಪಟಾಕಿ ದುರಂತ: 9 ಮಹಿಳೆಯರು ಸೇರಿ 11 ಮಂದಿ ಮೃತ್ಯು

Prasthutha|

ಚೆನ್ನೈ: ಅತ್ತಿಬೆಲೆ ಪಟಾಕಿ ದರಂತದ ಕಹಿ ಮಾಸುವ ಮುನ್ನವೇ ತಮಿಳುನಾಡಿನ ಶಿವಾಕಾಶಿಯಲ್ಲಿ ಭೀಕರ ದುರಂತ ಸಂಭವಿಸಿದೆ. 2 ಪಟಾಕಿ ಫ್ಯಾಕ್ಟರಿಗಳಲ್ಲಿ ಸ್ಫೋಟ ಸಂಭವಿಸಿದ್ದು, 9 ಮಹಿಳೆಯರು ಸೇರಿ 11 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ.

- Advertisement -

ಪಟಾಕಿ ಮಾದರಿಯನ್ನು ಪರೀಕ್ಷಿಸುವ ವೇಳೆ ಸ್ಫೋಟ ಸಂಭವಿಸಿದೆ. ಪಟಾಕಿ ದಸ್ತಾನು, ಮದ್ದು ತುಂಬಿದ ದಾಸ್ತಾನು ಸ್ಫೋಟಗೊಂಡಿದೆ.

ಸ್ಥಳಕ್ಕೆ ಪೊಲೀಸ್ ಹಾಗೂ ಅಗ್ನಿಶಾಮಕ ದಳ ಧಾವಿಸಿ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ಎರಡೂ ಘಟಕಗಳು ಸರ್ಕಾರದಿಂದ ಪರವಾನಗೆ ಪಡೆದಿರುವುದು ಖಚಿತವಾಗಿದ್ದು, ಅನಧಿಕೃತ ದಾಸ್ತಾನು, ಹೆಚ್ಚುವರಿ ದಾಸ್ತಾನು ಕುರಿತು ತನಿಖೆ ನಡೆಯುತ್ತಿದೆ. ಇನ್ನು ಪಟಾಕಿ ಘಟಕಗಳು ಹೊಂದಿರಬೇಕಾದ ಸುರಕ್ಷತಾ ಮಾನದಂಡ ಪಾಲಿಸಲಾಗಿದೆಯೇ ಎಂದೂ ತನಿಖೆ ನಡೆಯುತ್ತಿದೆ.

- Advertisement -

ಘಟನೆಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಮೃತರ ಕುಟುಂಬಗಳಿಗೆ ತಲಾ 3 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ ತಾಲೂಕಿನ ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ನಡೆದ ಅಗ್ನಿ ದುರಂತದಲ್ಲಿ ಒಟ್ಟು 16 ಮಂದಿ ಮೃತಪಟ್ಟಿದ್ದರು. ಆ ಈ ಅಗ್ನಿ ದುರಂತ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದೆ. ಪಟಾಕಿ ಅಂಗಡಿ ಮಾಲೀಕ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.