ನಾನು JDS ರಾಜ್ಯಾಧ್ಯಕ್ಷನಾಗಿದ್ದರೆ ಕುಮಾರಸ್ವಾಮಿಯನ್ನು 6 ವರ್ಷ ಅಮಾನತು ಮಾಡುತ್ತಿದ್ದೆ: ಹೆಚ್. ವಿಶ್ವನಾಥ್

Prasthutha|

ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ವಿಷಯಕ್ಕೆಸಂಬಂಧಿಸಿದಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಹೆಚ್ ಡಿ ಕುಮಾರಸ್ವಾಮಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವುದಾಗಿ ಮಾತನಾಡಿದ್ದರು. ಈ ಕುರಿತು ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಮಾತನಾಡಿದ್ದಾರೆ.

- Advertisement -

ನಾನೇನಾದರೂ JDS ರಾಜ್ಯಾಧ್ಯಕ್ಷನಾಗಿದ್ದರೆ ಕುಮಾರಸ್ವಾಮಿಯನ್ನು 6 ವರ್ಷ ಅಮಾನತು ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

ಮೈತ್ರಿಯ ಮೂಲಕ ಕುಮಾರಸ್ವಾಮಿ ಅವರು ಜಾತ್ಯತೀತ ಅನ್ನೋ ಅರ್ಥವನ್ನೇ ತೆಗೆದುಹಾಕಿಬಿಟ್ಟಿದ್ದಾರೆ. ಯಾರು ಚಮಚಾಗಿರಿ ಮಾಡುತ್ತಾರೆ ಅವರು ಮೈತ್ರಿಗೆ ಒಪ್ಪುತ್ತಾರೆ ಎಂದು ಖಾರವಾಗಿ ಕುಮಾರಸ್ವಾಮಿಯನ್ನು ಟೀಕಿಸಿದ ವಿಶ್ವನಾಥ್ ಸಿಎಂ ಇಬ್ರಾಹಿಂ ಪರ ಬ್ಯಾಟ್ ಬೀಸಿದ್ದಾರೆ.

- Advertisement -

ಸಿಎಂ ಇಬ್ರಾಹಿಂ ಅವರ ನಿಲುವು ಸರಿಯಾಗಿದೆ ಎಂದ ಅವರು, ಸಿಎಂ ಇಬ್ರಾಹಿಂಗೆ ಉಚ್ಚಾಟನೆ ಮಾಡುವ ಅಧಿಕಾರ ಇದೆ ಎಂದು ಹೇಳಿದ್ದಾರೆ.

Join Whatsapp