ಚೈತ್ರಾ ಪ್ರಕರಣ ಮಾದರಿಯಲ್ಲಿ ಮತ್ತೊಂದು ‘ಬಿಜೆಪಿ ಟಿಕೆಟ್ ವಂಚನೆ’ ಬೆಳಕಿಗೆ

Prasthutha|

ಕೊಟ್ಟೂರು: ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ಪಡೆದುಕೊಂಡು ವಂಚನೆ ಮಾಡಿದ ಕುರಿತು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2023ರ ವಿಧಾನ ಸಭಾ ಚುನಾವಣೆಯಲ್ಲಿ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಐವತ್ತು ಲಕ್ಷ ರೂ. ಹಣ ಪೀಕಿದ ಘಟನೆ ಇದಾಗಿದೆ.

- Advertisement -

ಬೆನಕನಹಳ್ಳಿ ರೇವಣಸಿದ್ದಪ್ಪ ಎಂಬ ಬಿಜೆಪಿ ಮುಖಂಡ ದೂರು ಸಲ್ಲಿಸಿದ್ದು, ಸಿ.ಶಿವಮೂರ್ತಿ ಎನ್ನುವ ಬಿಜೆಪಿ‌ ನಾಯಕ ಟಿಕೆಟ್ ಕೊಡಿಸುವುದಾಗಿ ತನಗೆ ಭಾರೀ ವಂಚನೆ ಮಾಡಿದ್ದು, ಆ ಹಣ ವಾಪಸು ಕೊಡುವಂತೆ ಕೇಳಿದಕ್ಕೆ ತನ್ನ ಮೇಲೆ ಜೀವ ಬೆದರಿಕೆ ಹಾಕಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೇಳಿಕೊಂಡಿದ್ದಾರೆ.

ದೂರುದಾರ ಶಿವಮೂರ್ತಿ ನಿವೃತ್ತ ಪಿಡಬ್ಲೂಡಿ ಸಹಾಯಕ ಇಂಜಿನಿಯರ್ ಕೂಡ. ಪಟ್ಟಣದ ಬಸವೇಶ್ವರ ನಗರ ನಿವಾಸಿ ಯಾಗಿದ್ದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಬಿಜೆಪಿ ಪ್ರಮುಖ ಮುಖಂಡನಾಗಿರುವೆ ಎಂದು ಹೇಳಿಕೊಂಡಿದ್ದಾರೆ.

- Advertisement -

ಬೆನಕನಹಳ್ಳಿ ರೇವಣ ಸಿದ್ದಪ್ಪ ತನ್ನನ್ನು 2022ರಲ್ಲಿ ಪರಿಚಯ ಮಾಡಿಕೊಂಡು, ರಾಜ್ಯದ ಬಹಷ್ಟು ಜನ ಹಿರಿಯ ಬಿಜೆಪಿ ಮುಖಂಡರುಗಳ ಸಂಪರ್ಕ ತಮಗಿದೆ, ಇದರ ಪ್ರಭಾವದ ಮೇರೆಗೆ ನಿಮಗೆ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಕೊಡಿಸುತ್ತೇನೆ ಎಂದು ನಂಬಿಸಿ ಭಾರೀ ಹಣ ಪಡೆದಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.

15 ದಿನಗಳ ನಂತರ ನನಗೆ ಬೆಂಗಳೂರಿನ ಹೋಟೆಲ್ ಒಂದರಲ್ಲಿ ಪುತ್ತೂರಿನ ಬಿಜೆಪಿ ಮುಖಂಡ ಎನ್.ಪಿ. ಶೇಖರ್ ಎಂಬವರನ್ನು ಪರಿಚಯಿಸಿದರು. ರೇವಣ ಸಿದ್ದಪ್ಪ ಮತ್ತು ಎನ್. ಪಿ.ಶೇಖರ್ ಇಬ್ಬರು ಸೇರಿ ನನಗೆ ಬಿಜೆಪಿ ಟಿಕೆಟ್ ಕೊಡಿಸುತ್ತೇವೆ ಎಂದು ಹೇಳಿದರಲ್ಲದೆ, ಸದ್ಯಕ್ಕೆ 50 ಲಕ್ಷ ರೂಪಾಯಿಗಳು ರೆಡಿ ಮಾಡಿಕೊಳ್ಳಿ ಅಂತ ಸೂಚಿಸಿದ್ದರು.

2022ರ ಅಕ್ಟೋಬರ್ 10 ರಂದು ರೇವಣಸಿದ್ದಪ್ಪ ಮತ್ತು ಎನ್.ಪಿ.ಶೇಖರ್ ನಮ್ಮ ಮನೆಗೆ ಬಂದು 30 ಲಕ್ಷ ರೂ ನಗದು ಹಣ ಪಡೆದುಕೊಂಡು ತೆರಳಿದ್ದರು. ನಂತರ ದಿನಾಂಕ ಅ.15 ರಂದು ಎನ್.ಪಿ.ಶೇಖರ್ ನನಗೆ ಪೋನ್ ಮಾಡಿ ನೀವು ಚಿತ್ರದುರ್ಗ ಬೈಪಾಸ್ ರಸ್ತೆಗೆ ಬಂದು ರೇವಣಸಿದ್ದಪ್ಪರ ಕಾರು ಚಾಲಕ ಅರ್ಜುನ್ ಬಿ.ಶೆಟ್ಟಿ ಇವರಿಗೆ 20 ಲಕ್ಷ ರೂ ಹಣ ತಲುಪಿಸುವಂತೆ ಸೂಚಿಸಿದಾಗ ನಾನು 20 ಲಕ್ಷ ರೂ. ನೀಡಿದ್ದೆ ಎಂದು ಶಿವಮೂರ್ತಿ ದೂರಿನಲ್ಲಿ ತಿಳಿಸಿದ್ದಾರೆ.

ಎನ್.ಪಿ. ಶೇಖರ್ 50‌ ಲಕ್ಷರೂಪಾಯಿಗಳ ಮೊತ್ತಕ್ಕೆ ಭದ್ರತೆಗಾಗಿ ಅರ್ಜುನ್ ಅವರ ಕಡೆಯಿಂದ ಶೇಖರ್ ರವರ ಬ್ಯಾಂಕ್ ಆಫ್ ಬರೋಡದ ಚೆಕ್ ನನಗೆ ನೀಡಿದ್ದರು. ನಂತರ ಬೆಂಗಳೂರಿನಲ್ಲಿ ರೇವಣಸಿದ್ದಪ್ಪ ಚಿಕ್ಕಜೋಗಿಹಳ್ಳಿ ನಾಗಪ್ಪರ ಸಮ್ಮುಖದಲ್ಲಿ15 ಲಕ್ಷರೂ. ಗಳ ಎರಡು ಬಾರಿ ಒಟ್ಟು 30 ಲಕ್ಷರೂಗಳ ಹಣವನ್ನು ಪಡೆದುಕೊಂಡಿದ್ದಾರೆ. ಎನ್.ಪಿ.ಶೇಖರ್ ರವರು ಹೇಳಿದಂತೆಲ್ಲಾ ಕಾರು ಚಾಲಕ ಅರ್ಜುನ್ ಬಿ.ಶೆಟ್ಟಿಯವರ ಬ್ಯಾಂಕ್ ಖಾತೆಗೆ ನವೆಂಬರ್ 20 ರಿಂದ 2023ರ ಫೆಬ್ರವರಿ 22ರ ವರೆಗೆ ಒಟ್ಟು 37 ಲಕ್ಷ 78 ಸಾವಿರ ರೂಪಾಯಿಗಳ ಹಣವನ್ನು ನನ್ನ ಬ್ಯಾಂಕ್ ಖಾತೆಯಿಂದ ನೀಡಿರುತ್ತೇನೆ ಅಲ್ಲದೆ ಬೇರೆಯವರ ಖಾತೆಯಿಂದಲೂ16 ಲಕ್ಷದ 75 ಸಾವಿರ ರೂಪಾಯಿಗಳನ್ನು ಜಮಾ ಮಾಡಿರುತ್ತೇನೆ ಎಂದು ಶಿವಮೂರ್ತಿ ದೂರಿನಲ್ಲಿ ವಿವರಸಿದ್ದಾರೆ.



Join Whatsapp