ಪುರಾತನ ವಿಗ್ರಹ ಜಪಾನ್​ಗೆ ಸಾಗಾಣೆ ಯತ್ನ : ವಿಮಾನ ನಿಲ್ದಾಣದಲ್ಲಿ ಖದೀಮನ ಸೆರೆ

Prasthutha|

ಬೆಂಗಳೂರು : ನಗರದಿಂದ ಜಪಾನ್ ಗೆ ಸಾಗಣೆ ಮಾಡುತ್ತಿದ್ದ ಪುರಾತನ ಕಾಲದ ಕಲ್ಲಿನ ವಿಗ್ರಹವನ್ನು ಭರ್ಜರಿ ಕಾರ್ಯಾಚರಣೆ ನಡೆಸಿರುವ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

- Advertisement -


ಪುರಾತನ ಕಾಲದ ಕಲ್ಲಿನ ವಿಗ್ರಹವನ್ನು ಏರ್ ಕಾರ್ಗೋ ಮೂಲಕ ಅಕ್ರಮವಾಗಿ ವಿದೇಶಕ್ಕೆ ಸಾಗಣೆ ಮಾಡುತ್ತಿದ್ದಾಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಳ್ಳಲಾಗಿದೆ.
ಪುರಾತನ ಕಲಾ ಸಂಪತ್ತು ಸಾಗಣೆ ನಿಷೇಧ ಖಾಯ್ದೆಯಡಿ ವಿಗ್ರಹ ವಶ ಪಡಿಸಿಕೊಂಡು, ವಿಗ್ರಹ ರಫ್ತು ಮಾಡಲು ಯತ್ನಿಸಿದ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ದೆಹಲಿ ಮೂಲದ ರಫ್ತುದಾರ ಮಹಾ ವಿಷ್ಣುವಿನ ಪುರಾತನ ವಿಗ್ರಹವನ್ನು ಜಪಾನ್​ಗೆ ಅಕ್ರಮ ಸಾಗಣೆ ಮಾಡಲು ಯತ್ನಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಚಿನ್ನದ ಬಿಸ್ಕೆಟ್​ಗಳು ವಶ:
ಮತ್ತೊಂದು ಕಾರ್ಯಾಚರಣೆಯಲ್ಲಿ ವಿದೇಶದಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನದ ಬಿಸ್ಕೆಟ್​ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ದುಬೈನಿಂದ ಬೆಂಗಳೂರಿಗೆ ಚಿನ್ನದ ಬಿಸ್ಕೆಟ್ ಕಳ್ಳಸಾಗಣೆ ಮಾಡ್ತಿದ್ದ ಪ್ರಯಾಣಿಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಇಂಡಿಗೋ 6ಇ 096 ವಿಮಾನದಲ್ಲಿ ಬಂದ ವೇಳೆ ಕಳ್ಳಸಾಗಣೆ ಪತ್ತೆಯಾಗಿದೆ. ಪ್ರಯಾಣಿಕನ ಬಳಿಯಿದ್ದ 15 ಚಿನ್ನದ ಚಿಸ್ಕೆಟ್ ಗಳನ್ನು ಕಸ್ಟಮ್ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ. 49.60 ಲಕ್ಷ ರೂಪಾಯಿ ಮೌಲ್ಯದ 1 ಕೆಜಿ 15 ಗ್ರಾಂ ತೂಕದ ಚಿನ್ನದ ಬಿಸ್ಕೆಟ್​ಗಳು ಇವಾಗಿವೆ.

- Advertisement -


ಬಾಯೊಳಗೆ ಚಿನ್ನ:
ಏರ್​ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳ‌ ಮತ್ತೂಂದು ಕಾರ್ಯಾಚರಣೆ ನಡೆಸಿ ಬಾಯಿಯೊಳಗೆ ಚಿನ್ನದ ತುಣುಕುಗಳನ್ನು ಇಟ್ಟುಕೊಂಡು ಬಂದಿದ್ದ ಪ್ರಯಾಣಿಕನನ್ನು ವಶಕ್ಕೆ ಪಡೆದಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಪ್ರಯಾಣಿಕ ದುಬೈನಿಂದ ನಗರಕ್ಕೆ ಆಗಮಿಸಿದ್ದು ಕಸ್ಟಮ್ ಅಧಿಕಾರಿಗಳು ತಪಾಸಣೆ ನಡೆಸುವ ವೇಳೆ ಅತನ ಬಾಯಲ್ಲಿ ಎರಡು ಚಿನ್ನದ ತುಣುಕುಗಳು ಪತ್ತೆಯಾಗಿವೆ.

ಆರೋಪಿ ಚೆನೈ ಮೂಲದ ಪ್ರಯಾಣಿಕ ಎಂದು ತಿಳಿದುಬಂದಿದೆ. ಪ್ರಯಾಣಿಕನ ಬಾಯಲ್ಲಿ 100 ಗ್ರಾಂ ತೂಕದ 4.9 ಲಕ್ಷ ರೂಪಾಯಿ ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ವಿಚಾರಣೆ ನಡೆಸುವ ವೇಳೆ ಮಾತನಾಡಲು ಪ್ರಯಾಣಿಕ ಕಷ್ಟ ಪಡುತ್ತಿದ್ದ, ಈ ಅಸ್ವಾಭಾವಿಕ ನಡತೆಯನ್ನು ಗಮನಿಸಿ ತಪಾಸಣೆ ನಡೆಸಿದಾಗ ಅಕ್ರಮ ಚಿನ್ನ ಸಾಗಣೆ ಪತ್ತೆಯಾಗಿದೆ

Join Whatsapp