ನಾಲ್ವರು ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ತಂದೆ

Prasthutha|

ಬ್ಲಾಕ್ ಫಂಗಸ್ ನಿಂದ ಪತ್ನಿಯ ಸಾವಿನಿಂದ ನೊಂದಿದ್ದ ಪತಿ

- Advertisement -

ಬೆಳಗಾವಿ: ನಾಲ್ವರು ಮಕ್ಕಳಿಗೆ ವಿಷವುಣಿಸಿ ತಂದೆಯೊಬ್ಬರು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಬೆಳಗಾವಿ ತಾಲೂಕಿನ ಬೋರಗಲ್ ಗ್ರಾಮದಲ್ಲಿ ಶನಿವಾರ ನಡೆದಿದೆ.


ಮಕ್ಕಳಾದ ಸೌಮ್ಯಾ (19), ಶ್ವೇತಾ ಹಾದಿಮನಿ (16), ಸಾಕ್ಷಿ (11), ಸೃಜನ (8) ಅವರಿಗೆ ವಿಷವುಣಿಸಿ ತಂದೆ ಗೋಪಾಲ (46) ಆತ್ಮಹತ್ಯೆಗೆ ಶರಣಾಗಿದ್ದಾರೆ.

- Advertisement -


ಇತ್ತೀಚೆಗೆ ಬ್ಲಾಕ್ ಫಂಗಸ್ ನಿಂದ ಪತ್ನಿ ಸಾವನ್ನಪ್ಪಿದ್ದರು. ಇದರಿಂದ ಮನನೊಂದ ಗೋಪಾಲ ಅವರು, ನಾಲ್ವರು ಮಕ್ಕಳಿಗೆ ನೀರಿನಲ್ಲಿ ವಿಷ ಬೆರೆಸಿ ಕುಡಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನಾಲ್ವರು ಮಕ್ಕಳ ಶವವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಲಾಗಿದೆ. ಮಕ್ಕಳ ಪ್ರಾರ್ಥೀವ ಶರೀರದ ಮುಂದೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಒಂದೇ ಕುಟುಂಬದ ಐವರ ಸಾವು ; ಕಂಬನಿ ಮಿಡಿದ ಸಚಿವ ಕಾರಜೋಳ
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಮಾಜಿ ಯೋಧನೊಬ್ಬ ತನ್ನ ಕುಟುಂಬದ ಸದಸ್ಯರಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ಬ್ಲ್ಯಾಕ್ ಫಂಗಸ್ ಸೋಂಕಿನಿಂದ ತನ್ನ ಪತ್ನಿಯನ್ನು ಕಳೆದುಕೊಂಡಿದ್ದ ಇವರು ನಾಲ್ಕು ಮಕ್ಕಳಿಗೆ ವಿಷ ಪ್ರಾಶನ ಮಾಡಿ ತಾನೂ ದಾರುಣವಾಗಿ ಸತ್ತಿರುವುದು ಮನಕಲಕುತ್ತದೆ ಎಂದು ಶೋಕ ವ್ಯಕ್ತಪಡಿಸಿರುವ ಸಚಿವ ಕಾರಜೋಳ, ಎಂತಹ ಪರಿಸ್ಥಿತಿಯಲ್ಲೂ ಡಿಪ್ರೆಶನ್ ಗೆ ಒಳಗಾಗಿ ಜೀವ ಕಳೆದುಕೊಳ್ಳದಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Join Whatsapp