ದೇವಸ್ಥಾನದಲ್ಲಿ ಬುದ್ಧನ ವಿಗ್ರಹವನ್ನಿಟ್ಟು ಹಿಂದೂ ದೇವರ ಹೆಸರಲ್ಲಿ ಪೂಜೆ; ವಿಗ್ರಹ ವಶಪಡಿಸಲು ಹೈಕೋರ್ಟ್ ಆದೇಶ

Prasthutha|

- Advertisement -

ತಮಿಳುನಾಡು: ಸೇಲಂ ಜಿಲ್ಲೆಯ ಕೊಟ್ಟೈ ರಸ್ತೆಯಲ್ಲಿರುವ ತಲೈವೆಟ್ಟಿ ಮುನಿಯಪ್ಪನ್ ದೇವಾಲಯದ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವಂತೆ ಮದ್ರಾಸ್ ಹೈಕೋರ್ಟ್ ಪುರಾತತ್ವ ಇಲಾಖೆಗೆ ನಿರ್ದೇಶನ ನೀಡಿದೆ. ದೇವಾಲಯದಲ್ಲಿನ ಬುದ್ದನ ವಿಗ್ರಹವನ್ನು ಪ್ರಸ್ತುತ ತಲೈವೆಟ್ಟಿ ಮುನಿಯಪ್ಪನ್ ಎಂದು ಪೂಜಿಸಲಾಗುತ್ತಿದೆ. ದೇವಾಲಯದಲ್ಲಿರುವ ದೇವರ ಪ್ರತಿಮೆಯು ಬುದ್ಧನ ಪ್ರತಿಮೆಯೇ ಹೊರತು ಹಿಂದೂ ದೇವತೆಯಲ್ಲ ಎಂದು ಮದ್ರಾಸ್ ಹೈಕೋರ್ಟ್ ಘೋಷಿಸಿದೆ.

ಸೇಲಂ ಮೂಲದ ಬುದ್ಧ ಟ್ರಸ್ಟ್ 2017 ರಲ್ಲಿ ಈ ವಿಗ್ರಹವು ಬುದ್ಧನದ್ದಾಗಿದೆ ಎಂದು ಅರ್ಜಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು. ರಾಜ್ಯ ಪುರಾತತ್ವ ಇಲಾಖೆ ಸಲ್ಲಿಸಿದ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಮೂರ್ತಿ ಎನ್.ಆನಂದ್ ವೆಂಕಟೇಶ್ ಅವರು, ಬುದ್ಧನ ಪ್ರತಿಮೆಯು ಮೂಲತಃ ಬುದ್ಧನ ವಿಗ್ರಹವಾಗಿದೆ ಎಂದು ಪ್ರಾಥಮಿಕ ಪರಿಶೀಲನೆಯಿಂದ ತಿಳಿದುಬಂದಿದೆ.

- Advertisement -

ಶಿಲ್ಪವು ಬುದ್ಧನದು ಎಂಬ ತೀರ್ಮಾನಕ್ಕೆ ಬಂದ ನಂತರ ತಪ್ಪಾದ ಗುರುತನ್ನು ಮುಂದುವರಿಸಲು ಅನುಮತಿಸಲಾಗುವುದಿಲ್ಲ. ವಿಗ್ರಹವನ್ನು ಅದರ ಮೂಲ ಸ್ವರೂಪಕ್ಕೆ ಮರುಸ್ಥಾಪಿಸಬೇಕು ಎಂದು ಧಾರ್ಮಿಕ ದತ್ತಿ ಇಲಾಖೆಗೆ ಹೈಕೋರ್ಟ್ ಆದೇಶಿಸಿದ್ದು, ಈ ದೇವಾಲಯದ ಒಳಗೆ ಬುದ್ಧನ ವಿಗ್ರಹ ಎಂದು ಬೋರ್ಡ್ ಹಾಕಬೇಕು ಎಂದು ಸೂಚಿಸಿದೆ.. ದೇವಾಲಯದಲ್ಲಿ ಯಾವುದೇ ಹೆಚ್ಚಿನ ಪೂಜೆಯನ್ನು ನಡೆಸದಂತೆ ನ್ಯಾಯಾಲಯವು ತಡೆದಿದೆ.



Join Whatsapp