ವಿಶಾಖಪಟ್ಟಣಂ: ಕೈಗಾರಿಕಾ ಪ್ರದೇಶದಲ್ಲಿ ಅನಿಲ ಸೋರಿಕೆ: 50 ಕಾರ್ಮಿಕರು ಅಸ್ವಸ್ಥ

Prasthutha|

ವೈಜಾಗ್: ಆಂಧ್ರಪ್ರದೇಶದ ಅನಕಪಲ್ಲೆ ಜಿಲ್ಲೆಯ ಬ್ರಾಂಡಿಕ್ಸ್ ವಿಶೇಷ ಆರ್ಥಿಕ ವಲಯದಲ್ಲಿರುವ ಉಡುಪು ತಯಾರಿಕಾ ಘಟಕದಲ್ಲಿ ಅನಿಲ ಸೋರಿಕೆಯಿಂದ ಕನಿಷ್ಠ 50 ಕಾರ್ಮಿಕರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

- Advertisement -

ಅನಿಲ ಸೋರಿಕೆಯಾದ ನಂತರ ಕಾರ್ಮಿಕರು ವಾಕರಿಕೆ ಮತ್ತು ವಾಂತಿ ಉಂಟಾಗಿದ್ದು, SEZ ವೈದ್ಯಕೀಯ ಕೇಂದ್ರದಲ್ಲಿ ಕಾರ್ಮಿಕರಿಗೆ ಪ್ರಥಮ ಚಿಕಿತ್ಸೆ ನೀಡಿ, ನಂತರ ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು ಎಂದು ತಿಳಿದು ಬಂದಿದೆ.

ಬ್ರಾಂಡಿಕ್ಸ್ ನ ಆವರಣದಲ್ಲಿ ಅನಿಲ ಸೋರಿಕೆ ನಡೆದಿದೆ ಎಂದು ವರದಿಯಾಗಿದ್ದು, 50 ಜನರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಆವರಣದಲ್ಲಿ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ ಎಂದು ಅನಕಪಲ್ಲೆ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

Join Whatsapp