ಚೀನಾದ ಎಚ್ಚರಿಕೆಯ ನಡುವೆ ತೈವಾನ್ ಗೆ ಆಗಮಿಸಿದ ಅಮೆರಿಕ ಸ್ಪೀಕರ್ ನ್ಯಾನ್ಸಿ ಪೆಲೋಸಿ

Prasthutha|

ತೈಪೆ: ಚೀನಾದ ತೀವ್ರ ಬೆದರಿಕೆಗಳ ಹೊರತಾಗಿಯೂ ಅಮೇರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮಂಗಳವಾರ ರಾತ್ರಿ ತೈವಾನ್ ಗೆ ಆಗಮಿಸಿದ್ದಾರೆ. ಆ ಮೂಲಕ 25 ವರ್ಷಗಳಲ್ಲಿ ಚೀನಾದ ಸ್ವಯಮಾಡಳಿತದ ದ್ವೀಪಕ್ಕೆ ಭೇಟಿ ನೀಡಿದ ಅತ್ಯುನ್ನತ ಶ್ರೇಣಿಯ ಅಮೆರಿಕನ್ ಅಧಿಕಾರಿ ಎಂದೆನಿಸಿಕೊಂಡಿದ್ದಾರೆ.

- Advertisement -

ಪೆಲೋಸಿ ಅವರ ಭೇಟಿಯು ಚೀನಾ ಮತ್ತು ಅಮೇರಿಕಾ ನಡುವೆ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ತೈವಾನ್ ಅನ್ನು ತನ್ನ ಭೂಪ್ರದೇಶದ ಭಾಗವೆಂದು ಚೀನಾ ಹೇಳಿಕೊಳ್ಳುತ್ತಿದ್ದು ಅಲ್ಲಿಗೆ ನಿರ್ಬಂಧದ ನಡುವೆಯೂ ಪೆಲೋಸಿ ಆಗಮಿಸಿದ್ದು ಕುತೂಹಲ ಕೆರಳಿಸಿದೆ

ಪೆಲೋಸಿ ತೈವಾನ್ ಪ್ರವೇಶಿಸಿದರೆ ತೀವ್ರ ಮಟ್ಟದ ಕ್ರಮಗಳು ಎದುರಿಸಬೇಕಾಗಿ ಬರಬಹುದು ಎಂದು ಚೀನಾ ಎಚ್ಚರಿಕೆ ನೀಡಿತ್ತು, ಆದರೆ ಅವು ಏನಾಗಿರಬಹುದು ಎಂಬುದರ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ. ಇದೀಗ ಪೆಲೋಸಿ ಆಗಮನದ ನಂತರ, ಚೀನಾದ ವಾಯುಪಡೆಯ ಸು-35 ಫೈಟರ್ ಜೆಟ್ಗಳು ತೈವಾನ್ ಜಲಸಂಧಿಯನ್ನು ದಾಟುತ್ತಿವೆ ಎಂದು ವರದಿಯಾಗಿದೆ.

- Advertisement -

ಬೈಡನ್ ಆಡಳಿತವು ಪೆಲೋಸಿ ಭೇಟಿಯನ್ನು ರದ್ದುಗೊಳಿಸುವಂತೆ  ಯಾವುದೇ ಆದೇಶ ಹೊರಡಿಸಿಲ್ಲ, ಆದರೆ ತೈವಾನ್ ಬಗ್ಗೆ ಯುಎಸ್ ನೀತಿಯಲ್ಲಿ ಯಾವುದೇ ಬದಲಾವಣೆಯನ್ನು ಸೂಚಿಸುವುದಿಲ್ಲ ಎಂದು ಬೀಜಿಂಗ್ ಗೆ ಭರವಸೆ ನೀಡಿದೆ. ತೈವಾನ್ ವಿಷಯದಲ್ಲಿ ವಾಷಿಂಗ್ಟನ್ ಮಾಡಿದ ದ್ರೋಹವು ಅದರ ರಾಷ್ಟ್ರೀಯ ವಿಶ್ವಾಸಾರ್ಹತೆಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವಂತೆ ಮಾಡಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.

Join Whatsapp