ಫುಟ್ಬಾಲ್‌ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಕಾರು ಅಪಘಾತ

Prasthutha|

ಸ್ಪೈನ್‌: ಫುಟ್ಬಾಲ್‌ ಲೋಕದ ದಿಗ್ಗಜ ಆಟಗಾರ. ಪೋರ್ಚುಗಲ್‌ನ ಸ್ಟಾರ್‌ ಸ್ಟ್ರೈಕರ್‌ ಕ್ರಿಸ್ಟಿಯಾನೋ ರೊನಾಲ್ಡೊ ಅವರ ದುಬಾರಿ ಬುಗಾಟಿ ವೆರಾನ್ ಕಾರು, ಸ್ಪ್ಯಾನಿಷ್ ನಗರದ ಮಜೋರ್ಕಾದಲ್ಲಿ ಅಪಘಾತಕ್ಕೀಡಾಗಿದೆ. ಕ್ರಿಸ್ಟಿಯಾನೋ ರೊನಾಲ್ಡೊ ಕುಟುಂಬ ಸಮೇತರಾಗಿ ಪ್ರಸ್ತುತ ಸ್ಪೈನ್‌ ಪ್ರವಾಸದಲ್ಲಿರುವ ನಡುವೆಯೇ ಅಪಘಾತ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.

- Advertisement -

ಫುಟ್ಬಾಲ್‌ ಲೋಕದ ದಿಗ್ಗಜ ಆಟಗಾರ. ಪೋರ್ಚುಗಲ್‌ನ ಸ್ಟಾರ್‌ ಸ್ಟ್ರೈಕರ್‌ ಕ್ರಿಸ್ಟಿಯಾನೋ ರೊನಾಲ್ಡೊ ಅವರ ದುಬಾರಿ ಬುಗಾಟಿ ವೆರಾನ್ ಕಾರು, ಸ್ಪ್ಯಾನಿಷ್ ನಗರದ ಮಜೋರ್ಕಾದಲ್ಲಿ ಅಪಘಾತಕ್ಕೀಡಾಗಿದೆ. ಕ್ರಿಸ್ಟಿಯಾನೋ ರೊನಾಲ್ಡೊ ಕುಟುಂಬ ಸಮೇತರಾಗಿ ಪ್ರಸ್ತುತ ಸ್ಪೈನ್‌ ಪ್ರವಾಸದಲ್ಲಿರುವ ನಡುವೆಯೇ ಅಪಘಾತ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.

ರೊನಾಲ್ಡೊ ವಾಸವಿದ್ದ ರೆಸಾರ್ಟ್‌ ಸಮೀಪವೇ ಅಪಘಾತ ನಡೆದಿದೆ. ಮನೆಯ ಮಾಲೀಕನಿಗೆ ಆಗಿರುವ ಎಲ್ಲಾ ನಷ್ಟಗಳನ್ನು ಭರಿಸುವುದಾಗಿ ರೊನಾಲ್ಡೊ ಅವರ ಪ್ರತಿನಿಧಿಗಳು ಮನೆ ಮಾಲೀಕನನ್ನು ಭೇಟಿ ಮಾಡಿ ಭರವಸೆ ನೀಡಿದ್ದಾರೆ ಎಂದು ಸ್ಥಳೀಯ ಮಧ್ಯಮಗಳು ವರದಿ ಮಾಡಿದೆ. 

- Advertisement -

2018ರಲ್ಲಿ ಯುರೋ ಕಪ್ ಗೆದ್ದ ಬಳಿಕ ರೊನಾಲ್ಡೊ ಈ ಕಾರನ್ನು ಖರೀದಿಸಿದ್ದರು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ರೊನಾಲ್ಡೊ ಬಳಿ ಆಸ್ಟನ್ ಮಾರ್ಟಿನ್, ಬೆಂಟ್ಲಿ ಮತ್ತು ಫೆರಾರಿ 599 ಜಿಟಿಒ, ಮೆಕ್‌ ಲಾರೆನ್‌ ಸೆನ್ನಾ, ರಾಲ್ಸ್‌ ರಾಯ್ಸ್ ಸೇರಿದಂತೆ ಅನೇಕ ಐಷಾರಾಮಿ ಕಾರುಗಳ ಸಂಗ್ರಹವಿದೆ. 66 ಕೋಟಿ ಮೌಲ್ಯದ ಫೋಕ್ಸ್ ವ್ಯಾಗನ್ ಕಂಪನಿಯ ʻಬುಗಾಟಿ ಲಿಮಿಟೆಡ್‌ ಎಡಿಶನ್‌ʼ ಕಾರು ಕೂಡ ಇದರಲ್ಲಿದೆ.

Join Whatsapp