ಚೀನಾದ ಸೈನಿಕರ ಸಾವಿನ ಬಗ್ಗೆ ವರದಿ ಪ್ರಕಟಿಸಿದ ಬ್ಲಾಗರ್ ಗೆ ಎಂಟು ತಿಂಗಳ ಜೈಲುಶಿಕ್ಷೆ

Prasthutha|

ಭಾರತದೊಂದಿಗಿನ ಗಾಲ್ವಾನ್ ಕಣಿವೆಯ ಘರ್ಷಣೆಯ ವೇಳೆ ಉಂಟಾದ ಸಾವುನೋವುಗಳಿಗೆ ಸಂಬಂಧಿಸಿ ವರದಿ ಪ್ರಕಟಿಸಿದ ಕಾರಣಕ್ಕೆ ಈ ವರ್ಷದ ಆರಂಭದಲ್ಲಿ ಬಂಧನಕ್ಕೊಳಗಾದ ಚೀನಾದ ಪ್ರಸಿದ್ಧ ಬ್ಲಾಗರ್ಗೆ ಎಂಟು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

- Advertisement -

2.5 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ಕಿಯು ಝಿಮಿಂಗ್ ಶಿಕ್ಷೆಗೆ ಒಳಗಾದ ಬ್ಲಾಗರ್. ‘ಹುತಾತ್ಮ ಯೋಧರಿಗೆ ಅವಮಾನ ಮಾಡಿದ ಆರೋಪದಲ್ಲಿ ಅವರಿಗೆ ಎಂಟು ತಿಂಗಳ ಜೈಲು ಶಿಕ್ಷೆಯನ್ನು ಚೀನಾ ನ್ಯಾಯಾಲಯ ವಿಧಿಸಿದೆ. ಕ್ರಿಮಿನಲ್ ಕಾನೂನಿಗೆ ಹೊಸ ತಿದ್ದುಪಡಿ ತಂದ ನಂತರ ಚೀನಾದಲ್ಲಿ ಶಿಕ್ಷೆ ವಿಧಿಸುತ್ತಿರುವ ಮೊದಲ ಪ್ರಕರಣ ಇದಾಗಿದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಆನ್ ಲೈನ್ ನಲ್ಲಿ ‘ಲ್ಯಾಬಿಕ್ಸಿಯಾಕಿಯು’ ಎಂದು ಕರೆಯಲ್ಪಡುವ ಬ್ಲಾಗರ್, ಪ್ರಮುಖ ದೇಶೀಯ ಪೋರ್ಟಲ್ಗಳು ಮತ್ತು ರಾಷ್ಟ್ರೀಯ ಮಾಧ್ಯಮಗಳ ಮೂಲಕ ಸಾರ್ವಜನಿಕವಾಗಿ ಕ್ಷಮೆಯಾಚಿಸಲು 10 ದಿನಗಳ ಕಾಲಾವಕಾಶ ನೀಡಲಾಗಿದೆ. ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದ ನಾನ್ಜಿಂಗ್ ನ್ಯಾಯಾಲಯ ಈ ಆದೇಶ ನೀಡಿದೆ.