ಕೋವಿಡ್ ಬಿಕ್ಕಟ್ಟು ನಿಭಾಯಿಸುವಲ್ಲಿ ವೈಫಲ್ಯವಾದ ಉತ್ತರಪ್ರದೇಶದ ಯೋಗಿ ಸರಕಾರಕ್ಕೆ ಚುನಾವಣಾ ಭೀತಿ : ಸರಣಿ ಸಭೆ ನಡೆಸಿದ ನಾಯಕರು

Prasthutha|

ಲಕ್ನೋ : ಕೋವಿಡ್ ಸಾಂಕ್ರಮಿಕ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಿರ್ಣಾಯಕ ಚುನಾವಣೆ ಎದುರಿಸುತ್ತಿರುವ ಹಿನ್ನಲೆಯಲ್ಲಿ ಸರಣಿ ಸಭೆಗಳನ್ನು ನಡೆಸಲಾಗಿದೆ.ಕೇಂದ್ರದ ಇಬ್ಬರು ಬಿಜೆಪಿ ನಾಯಕರಾದ ಬಿ.ಎಲ್.ಸಂತೋಷ್ ಹಾಗೂ ಮಾಜಿ ಕೇಂದ್ರ ಸಚಿವ ರಾಧಾ ಮೋಹನ್ ಸಿಂಗ್ ಅವರು ಸೋಮವಾರ ಲಕ್ನೋದಲ್ಲಿ ಉತ್ತರಪ್ರದೇಶದ ಮಂತ್ರಿಗಳನ್ನು ಭೇಟಿಯಾಗಿ ಮಾತನಾಡಿದರು.

- Advertisement -

ಬಿಜೆಪಿಯ ರಾಷ್ಟ್ರೀಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಹಾಗೂ ಸಿಂಗ್ ಅವರು ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದಾರೆ. ಇಬ್ಬರು ಉಪ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದಾರೆ. ಚುನಾವಣೆಗೆ ಮುನ್ನ ಮೂವರನ್ನು ಬದಲಾಯಿಸಲಾಗುವುದು ಎಂಬ ಊಹಾಪೋಹಗಳನ್ನು ಮೂಲಗಳು ತಳ್ಳಿಹಾಕಿವೆ. ಕಳೆದ ಕೆಲವು ತಿಂಗಳುಗಳಲ್ಲಿ ಹಾಗೂ ಅದಕ್ಕೂ ಮೊದಲು ರಾಜ್ಯದಾದ್ಯಂತ ಕೋವಿಡ್ ಪರಿಹಾರಕ್ಕಾಗಿ ಪಕ್ಷವು ಮಾಡಿದ ಕಾರ್ಯಗಳನ್ನು ನಾಯಕರು ಪರಿಶೀಲಿಸುತ್ತಿದ್ದಾರೆ ಎಂದು ಬಿಜೆಪಿ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ಕೋವಿಡ್ ಉಲ್ಬಣಕ್ಕೆ ಆದಿತ್ಯನಾಥ್ ಸರಕಾರವೇ ನೇರ ಕಾರಣ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಾರ್ವಜನಿಕರು ತೀವ್ರವಾದ ಟೀಕೆಗಳನ್ನು ಮಾಡಿದ್ದರು . ರಾಜ್ಯ ಸರಕಾರವು ಕೋವಿಡ್ ಅನ್ನು ತಪ್ಪಾಗಿ ನಿರ್ವಹಿಸುವುದರಿಂದ ಎರಡನೆಯ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯ ಸಾವುಗಳು ಸಂಭವಿಸಿವೆ ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸಿದ್ದಾರೆ. ಬಿಜೆಪಿಯ ಶಾಸಕರು ಹಾಗೂ ಸಂಸದರು ಮಾಧ್ಯಮಗಳ ಮುಂದೆ ತಮ್ಮ ಸರಕಾರದ ಕುರಿತು ಟೀಕೆ ಮಾಡುತ್ತಿದ್ದಾರೆ.

Join Whatsapp