ಕೋವಿಡ್ ವಿರುದ್ಧದ ಹೋರಾಟದಲ್ಲಿ ಜನಬೆಂಬಲವನ್ನು ದುರ್ಬಲಗೊಳಿಸುವ ಪ್ರಯತ್ನ: ಕೇರಳ ಸಿಎಂ

Prasthutha|

ತಿರುವನಂತಪುರ: ‘ಕೇರಳದಲ್ಲಿ ದಿನೇದಿನೇ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಅಲ್ಲಿನ ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿದೆ’ ಎನ್ನುವ ಟೀಕೆಯನ್ನು ತಿರಸ್ಕರಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಇಂಥ ಟೀಕೆ ಅನಗತ್ಯ. ಇದು ಕೋವಿಡ್‌ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಜನಬೆಂಬಲವನ್ನು ದುರ್ಬಲಗೊಳಿಸುವ ಪ್ರಯತ್ನ’ ಎಂದಿದ್ದಾರೆ.

- Advertisement -

ಕೊವಿಡ್ ನಿರ್ವಹಣೆ ವಿರುದ್ಧದ ಟೀಕೆಗಳಿಗೆ ಎಡಪಕ್ಷದ ‘ಚಿಂತ’ ಮ್ಯಾಗಜಿನ್​​ನಲ್ಲಿ ಬರೆದ ಲೇಖನದಲ್ಲಿ ಪಿಣರಾಯಿ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಂದ ಯಾರೂ ಸಾಯಲಿಲ್ಲ ಅಥವಾ ಯಾರೂ ವೈದ್ಯಕೀಯ ನೆರವಿನಿಂದ ವಂಚಿತರಾಗಿಲ್ಲ ಎಂದು ಬರೆದಿದ್ದಾರೆ.

ಪ್ರಮುಖ ನಗರಗಳ ನಂತರ ಕೇರಳವು ಅತಿದೊಡ್ಡ ಜನಸಂಖ್ಯಾ ಸಾಂದ್ರತೆಯನ್ನು ಹೊಂದಿದೆ ಮತ್ತು ವೈರಸ್ ಗಂಭೀರ ಹಾನಿಯನ್ನು ಉಂಟುಮಾಡಿದ ಇತರ ಹಲವು ರಾಷ್ಟ್ರಗಳೊಂದಿಗೆ ರಾಜ್ಯವು ದೀರ್ಘಕಾಲದ ಸಂಬಂಧವನ್ನು ಹೊಂದಿದೆ. ಕೋವಿಡ್ ಅನ್ನು ತಡೆಗಟ್ಟಲು ಅತ್ಯಂತ ಪರಿಣಾಮಕಾರಿ ವಿಧಾನವೆಂದರೆ ಲಸಿಕೆ ಹಾಕುವುದು. ಇದನ್ನು ಖಾತ್ರಿಪಡಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ ಎಂಬುದು ಟೀಕಿಸುವವರಿಗೆ ಗೊತ್ತಿದೆ’ ಎಂದಿದ್ದಾರೆ.

- Advertisement -

ಕೇರಳದಲ್ಲಿ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ 30 ಸಾವಿರ ದಾಟಿದ್ದು, ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಬಿಜೆಪಿಯು, ಈ ಕುರಿತು ಸರ್ಕಾರ ತನ್ನ ಮೌನ ಮುರಿಯಬೇಕೆಂದು ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ವಿಜಯನ್ ಅವರ ಹೇಳಿಕೆಯು ಮಹತ್ವ ಪಡೆದು ಕೊಂಡಿದೆ.



Join Whatsapp