ಬೈಡೆನ್ ಅವರ ಇಸ್ರೇಲ್ ಪರ ನಿಲುವಿನ ವಿರುದ್ಧ ಅಮೆರಿಕದಲ್ಲಿ ಪ್ರತಿಭಟನೆ

Prasthutha|

ವಾಷಿಂಗ್ಟನ್: ಪ್ಯಾಲೆಸ್ತೀನ್ ಅನ್ನು ಬೆಂಬಲಿಸಿ ಅಮೆರಿಕನ್ ಜನತೆ ಬೀದಿಗಿಳಿದಿದ್ದು, ಲಾಸ್ ಏಂಜಲೀಸ್, ನ್ಯೂಯಾರ್ಕ್ ಮತ್ತು ಬೋಸ್ಟನ್‌ನಲ್ಲಿ ಸಾವಿರಾರು ಜನರು ಪ್ರತಿಭಟನಾ ರ‍್ಯಾಲಿ ನಡೆಸಿದ್ದಾರೆ.

ಅಮೆರಿಕದ ಬೀದಿಗಳಲ್ಲಿ ಫೆಲೆಸ್ತೀನ್ ಅನ್ನು ವಿಮೋಚಿಸಿ, ಇಸ್ರೇಲ್ ನರಮೇಧವನ್ನು ನಿಲ್ಲಿಸಲಿ ಎಂಬ ಘೋಷಣೆಗಳು ಮೊಳಗುತ್ತಿದ್ದು, ಪ್ರತಿಭಟನಾಕಾರರು ಫೆಲೆಸ್ತೀನ್ ಗೆ ಐಕಮತ್ಯವನ್ನು ಘೋಷಿಸುವ ಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಫೆಲೆಸ್ತೀನಿಯರಿಗೆ ಸ್ವತಂತ್ರರಾಗಿ ಬದುಕುವ ಹಕ್ಕಿದೆ. ಅಲ್ಲಿನ ಮಕ್ಕಳನ್ನು ಕೊಲ್ಲಬಾರದು. ನರ ಹತ್ಯೆ ನಡೆಸುವವರನ್ನು ಬೆಂಬಲಿಸುವುದನ್ನು ಕೊನೆಗೊಳಿಸಬೇಕೆಂದು ಪ್ರತಿಭಟನಾಕಾರರು ಘೋಷಣೆಗಳನ್ನು ಮೊಳಗಿಸಿದ್ದಾರೆ.

ಇಸ್ರೇಲ್ ಆಕ್ರಮಣ ಏಳನೇ ದಿನಕ್ಕೆ ಕಾಲಿಡುತ್ತಿದ್ದಂತೆ 170 ಕ್ಕೂ ಹೆಚ್ಚು ಫೆಲೆಸ್ತೀನಿಯರು ಹತರಾಗಿದ್ದಾರೆ ಎಂದು ವರದಿಯಾಗಿದೆ. ಇದರಲ್ಲಿ 41 ಮಕ್ಕಳು ಬಲಿಯಾಗಿದ್ದು, ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

- Advertisement -