ಕೋವಿಡ್ ಸೋಂಕಿತ ಅಣ್ಣನನ್ನೇ ಕೊಚ್ಚಿ ಕೊಂದ ತಮ್ಮ!

Prasthutha|

ಚಿಕ್ಕಮಗಳೂರು: ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಅಣ್ಣನನ್ನೇ ತಮ್ಮನೊಬ್ಬ ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸಾ ತಾಲೂಕಿನ ಮರಸಣಿಗೆ ಗ್ರಾಮದಲ್ಲಿ ನಡೆದಿದೆ.

- Advertisement -

ಮಹಾವೀರ ತಮ್ಮನಿಂದ ಕೊಲೆಗೀಡಾದ ಸೋಂಕಿತ. ಕೆಲ ದಿನಗಳ ಹಿಂದೆ ಮಹಾವೀರನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಇರಲು ಸಾಧ್ಯವೇ ಇಲ್ಲ, ತನ್ನನ್ನು ಡಿಸ್ಚಾರ್ಜ್ ಮಾಡುವಂತೆ ಹೇಳಿ ಪಟ್ಟುಹಿಡಿದು ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದ.

ಮಹಾವೀರ ಮನೆಗೆ ಬರುತ್ತಿದ್ದಂತೆಯೇ ಅಣ್ಣ-ತಮ್ಮನ ನಡುವೆ ಜಗಳ, ಗಲಾಟೆ ನಡೆದಿದ್ದು, ಈ ನಡುವೆ ಕೋಪದಿಂದ ಅಣ್ಣ ಮಹಾವೀರನ ಮೇಲೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

Join Whatsapp