ಭಾರೀ ಗಾಳಿ ಮಳೆ ಪುಂಜಾಲಕಟ್ಟೆ ಸರಕಾರಿ ಪ್ರೌಢ ಶಾಲೆಯ ಮೇಲ್ಚಾವಣಿ ಕುಸಿತ

Prasthutha|

ಪುಂಜಾಲಕಟ್ಟೆ, ಮೇ.16: ನಿನ್ನೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪುಂಜಾಲಕಟ್ಟೆ ಸರಕಾರಿ ಪ್ರೌಢ ಶಾಲೆಯ ಎರಡು ಕೊಠಡಿಗಳ ಮೇಲ್ಚಾವಣಿ ಕುಸಿದು ಬಿದ್ದಿದ್ದು ಇನ್ನುಳಿದ ತರಗತಿಗಳ ಮೇಲ್ಚಾವಣಿ ಕುಸಿಯುವ ಭೀತಿಯಲ್ಲಿದೆ.

- Advertisement -

ಸ್ಥಳಕ್ಕೆ ಬೇಟಿ ನೀಡಿದ ಮಡಂತ್ಯಾರ್ ಗ್ರಾಮ ಪಂಚಾಯತ್ ಸದಸ್ಯ ಹನೀಫ್ ಪುಂಜಾಲಕಟ್ಟೆ ಸ್ಥಳದಲ್ಲಿದ್ದ ಪ್ರಾಂಶುಪಾಲರೊಂದಿಗೆ ಚರ್ಚಿಸಿ ಕೊಠಡಿಯೊಳಗಿರುವ ಬೆಂಚು ಮತ್ತು ಮೇಜುಗಳನ್ನು ಬೇರೆ ಕೊಠಡಿಗೆ ಸ್ಥಳಾಂತರಿಸಲು ಸಹಕರಿಸುವುದಾಗಿಯೂ ಹಾಗೂ ಘಟನೆಯ ಬಗ್ಗೆ ಪಂಚಾಯತ್ ಅಧ್ಯಕ್ಷರ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ಗಮನಕ್ಕೆ ತಂದು ಮುಂದಿನ ಪರಿಹಾರದ ಬಗ್ಗೆ ಚರ್ಚಿಸಿ ತೀರ್ಮಾಣ ಕೈಗೊಳ್ಳುವುದಾಗಿ ಹೇಳಿದರು. ಸ್ಥಳದಲ್ಲಿ ಅಂಗನವಾಡಿ ಕಾರ್ಯಕರ್ತೆ ಗೀತಾ ಹಾಗೂ ಶಾಲೆಯ ಪ್ರಾಂಶುಪಾಲರು ಉಪಸ್ಥಿತರಿದ್ದರು.

   
Join Whatsapp