ವಾಷಿಂಗ್ಟನ್: ಅಮೇರಿಕಾ ಮತ್ತು ಇತರ ದೇಶಗಳ ಸಮಸ್ಯೆಗಳಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡಿದರೆ ಯಾವ ಕ್ರಮ ಕೈಗೊಳ್ಳಲೂ ಹಿಂಜರಿಯುವುದಿಲ್ಲ ಎಂದು ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಚೀನಾಕ್ಕೆ ಬಲವಾದ ಎಚ್ಚರಿಕೆ ನೀಡಿದ್ದಾರೆ. ಯುಎಸ್ ಸ್ಟೇಟ್ ಡಿಪಾರ್ಟ್ಮೆಟ್‌ನ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ಬೈಡೆನ್ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಆರ್ಥಿಕ ದುರುಪಯೋಗ ಸೇರಿದಂತೆ ಚೀನಾದ ಕ್ರಮಗಳನ್ನು ಅಮೇರಿಕಾ ತೀವ್ರವಾಗಿ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.
ಚೀನಾದ ಯಾವುದೇ ಸವಾಲನ್ನು ಅಮೆರಿಕ ಎದುರಿಸಲಿದೆ ಎಂದು ಬೈಡೆನ್ ಹೇಳಿದ್ದಾರೆ. ಅಮೆರಿಕದ ಉದ್ಯೋಗಗಳಿಗೆ ಮತ್ತು ಅಮೆರಿಕದ ಕಾರ್ಮಿಕರಿಗೆ ಹಾನಿ ಮಾಡುವ ಚೀನಾದ ವ್ಯಾಪಾರ ದುರುಪಯೋಗವನ್ನು ಆದಷ್ಟು ಬೇಗ ನಿಲ್ಲಿಸಬೇಕು ಎಂದು ಅಮೇರಿಕ ಈ ಹಿಂದೆ ಸೂಚಿಸಿತ್ತು. ಕಮ್ಯುನಿಸ್ಟ್ ಚೀನಾದ ಬೆದರಿಕೆಯನ್ನು ಎದುರಿಸಲು ಪೆಂಟಗಾನ್ ಆದ್ಯತೆ ನಿಡಬೇಕೆಂದು ಸೆನೆಟರ್‌ಗಳು ಮತ್ತು ಇತರರು ಕರೆ ನೀಡಿದ್ದರು. ರಕ್ಷಣಾ ಸಚಿವರಿಗೆ ಬರೆದ ಪತ್ರಗಳಲ್ಲಿ ಹಲವರು ಇದನ್ನು ಉಲ್ಲೇಖಿಸಿದ್ದರು.