ಅಂಬೇಡ್ಕರ್ ಕುಟುಂಬ ರಾಜಕೀಯ ಒಪ್ಪಿಕೊಳ್ಳುತ್ತಿರಲಿಲ್ಲ: ಶಶಿ ತರೂರ್

Prasthutha|

ನವದೆಹಲಿ: ಬಿ.ಆರ್.ಅಂಬೇಡ್ಕರ್ ಅವರು ರಾಜಕೀಯ ನಾಯಕತ್ವವು ಚುನಾವಣೆ ಅಥವಾ ಇತರ ರೀತಿಯ ಅರ್ಹತೆಗಳಿಗಿಂತ ಹೆಚ್ಚಾಗಿ ಉತ್ತರಾಧಿಕಾರದ ಮೂಲಕ ಹೋಗಬೇಕು ಎಂಬ ಕಲ್ಪನೆಯನ್ನು ತಿರಸ್ಕರಿಸುತ್ತಿದ್ದರು, ಅವರು ಕುಟುಂಬ ರಾಜಕೀಯ ಒಪ್ಪಿಕೊಳ್ಳುತ್ತಿರಲಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಗುರುವಾರ ಹೇಳಿದ್ದಾರೆ.

- Advertisement -

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಿರುವ ತರೂರ್, ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದಲ್ಲಿ ತಮ್ಮ ಹೊಸ ಪುಸ್ತಕ ‘ಅಂಬೇಡ್ಕರ್: ಎ ಲೈಫ್’ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಅಂಬೇಡ್ಕರ್ ಅವರು ರಾಜಕೀಯದಲ್ಲಿ ಅಥವಾ ಇನ್ನಾವುದೇ ಸ್ಥಳದಲ್ಲಿ ಕುಟುಂಬ ಉತ್ತರಾಧಿಕಾರ ತತ್ವವನ್ನು ಒಪ್ಪಿಕೊಳ್ಳುತ್ತಿರಲಿಲ್ಲ ಎಂದು ಹೇಳಿದರು.

ರಾಜಕೀಯ ನಾಯಕತ್ವವು ಚುನಾವಣೆ ಅಥವಾ ಇತರ ರೀತಿಯ ಅರ್ಹತೆಯ ಮೂಲಕ ಹೋಗುವುದಕ್ಕಿಂತ ಹೆಚ್ಚಾಗಿ ಉತ್ತರಾಧಿಕಾರದ ಮೂಲಕ ಹೋಗಬೇಕು ಎಂಬ ವಿಚಾರವನ್ನು ಸಾಕಷ್ಟು ಟೀಕಿಸುತ್ತಿದ್ದರು ಎಂದು ತರೂರ್ ಹೇಳಿದರು.



Join Whatsapp