ಇಂಗ್ಲಿಷ್ ಬದಲು ಹಿಂದಿ, ಸ್ಥಳೀಯ ಬಾಷೆಗಳನ್ನು ಪ್ರೋತ್ಸಾಹಿಸುವುದರಲ್ಲಿ ಯಾವುದೇ ತಪ್ಪಿಲ್ಲ: ಸಿಟಿ ರವಿ

Prasthutha|

ನವದೆಹಲಿ: ಇಂಗ್ಲಿಷ್ ಬದಲು ಹಿಂದಿ, ಸ್ಥಳೀಯ ಬಾಷೆಗಳನ್ನು ಪ್ರೋತ್ಸಾಹಿಸುವುದರಲ್ಲಿ ಯಾವುದೇ ತಪ್ಪಿಲ್ಲ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶದ ವಿವಿಧ ಭಾಗಗಳಲ್ಲಿನ ಮಾತೃಭಾಷೆಗಳನ್ನು ಉತ್ತೇಜಿಸುತ್ತಿದೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದ್ದಾರೆ.

- Advertisement -

ತಮಿಳುನಾಡಿನ ಬಿಜೆಪಿಯ ಉಸ್ತುವಾರಿ ಹೊತ್ತಿರುವ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ , ಕೇಂದ್ರವು ಹಿಂದಿಯೇತರ ಭಾಷಿಕ ರಾಜ್ಯಗಳ ಮೇಲೆ ಹಿಂದಿ ಹೇರುತ್ತಿದೆ ಎಂದು ವಿರೋಧ ಪಕ್ಷದ ನಾಯಕರಾದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಟೀಕೆಯನ್ನು ತಳ್ಳಿಹಾಕಿ ಮಾತಾಡಿದ್ದು, ಜನರು ಈ ವಸಾಹತುಶಾಹಿ ಮನಸ್ಥಿತಿಯಿಂದ ಹೊರಬರಬೇಕು ಮತ್ತು ಅಂತಹ ಮನಸ್ಥಿತಿಯು ಇಂಗ್ಲಿಷ್ ಬಳಕೆಗೆ ಉತ್ತೇಜನೆ ನೀಡುತ್ತದೆ ಎಂದು ಹೇಳಿದರು.

ಹಿಂದಿ ಮಾತನಾಡುವ ರಾಜ್ಯಗಳಲ್ಲಿನ ಐಐಟಿಗಳಂತಹ ಕೇಂದ್ರೀಯ ತಾಂತ್ರಿಕ ಮತ್ತು ತಾಂತ್ರಿಕೇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ಮಾಧ್ಯಮವು ಹಿಂದಿ ಮತ್ತು ಇತರೆಡೆಗಳಲ್ಲಿ ಆಯಾ ಸ್ಥಳೀಯ ಭಾಷೆಗಳಲ್ಲಿರಬೇಕು ಎಂದು ಸಂಸದೀಯ ಸಮಿತಿಯ ಶಿಫಾರಸುಗಳಿಗೆ ವಿಜಯನ್ ಇತ್ತೀಚೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಷಯದಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕೆಂದು ಕೇರಳ ಸಿಎಂ ಕೋರಿದ್ದರು.

- Advertisement -

ಇದಕ್ಕೆ ತಿರರುಗೇಟು ನೀಡಿದ ಸಿಟಿ ರವಿ, ಒಬ್ಬ ನಾಯಕ ಮಲಯಾಳಂನ ಹೆಮ್ಮೆ ಅಥವಾ ತಮಿಳಿನ ಹೆಮ್ಮೆ ಗಾಗಿ ಮಾತಾಡಿದರೆ, ನಮ್ಮ ಪಕ್ಷವು ಅದನ್ನು ಸ್ವಾಗತಿಸುತ್ತದೆ ಆದರೆ ಅವರು ಇಂಗ್ಲಿಷ್ ಪರವಾಗಿ ಮಾತಾಡಿದರೆ ಅದು ಸೂಕ್ತವಲ್ಲ. ಕೇಂದ್ರವು ಅಂತಿಮಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿ 2020 ಹಿಂದಿ ಮತ್ತು ಇತರ ಎಲ್ಲಾ ಭಾರತೀಯ ಭಾಷೆಗಳನ್ನು ಉತ್ತೇಜಿಸಲು ಉದ್ದೇಶಿಸಿದೆ ಎಂದು ಅವರು ಹೇಳಿದರು.

Join Whatsapp