ದೇಶದ್ರೋಹಿ RSS ಶಾಲೆಗಳನ್ನು‌ ಶಾಖೆಗಳನ್ನಾಗಿ ಮಾಡಲು ಹೊರಟಿದೆ: ಕಾಂಗ್ರೆಸ್ ಟೀಕೆ

Prasthutha|

ಬೆಂಗಳೂರು: ಸರ್ಕಾರಿ ವಸತಿ ಶಾಲೆಗಳಲ್ಲಿ ಆಯುಧ ತರಬೇತಿ ನೀಡುತ್ತಿರುವ RSS ಶಿಬಿರಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್, ದೇಶದ್ರೋಹಿ RSS ಶಾಲೆಗಳನ್ನು ಶಾಖೆಗಳನ್ನಾಗಿ ಮಾಡಲು ಹೊರಟಿದೆ ಎಂದು ಟೀಕಿಸಿದೆ.

- Advertisement -

ರಾಜ್ಯದ ಮೊರಾರ್ಜಿ ಶಾಲೆಗಳಲ್ಲಿ ದೇಶದ್ರೋಹಿ ಸಂಘಟನೆಯಾದ RSS ತನ್ನ ಕಾರ್ಯಕ್ರಮ ನಡೆಸುವ ಮೂಲಕ ಮುಗ್ದ ಮಕ್ಕಳನ್ನು ತನ್ನ ತೆಕ್ಕೆಗೆ ಸೆಳೆಯಲು ಮುಂದಾಗಿದೆ. RSS ಈಗ ಮಕ್ಕಳನ್ನು ಗುರಿಯಾಗಿಸಿ ತನ್ನ ಸಿದ್ದಾಂತ ತುಂಬಲು ಮುಂದಾಗಿರುವುದು ಅತ್ಯಂತ ಅಪಾಯಕಾರಿ ಎಂದು ಹೇಳಿದೆ.

ವಿದ್ಯಾರ್ಥಿ ಮತ್ತು ಹಲವು ಜನಪರ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಸರಕಾರ RSS ನಂತಹ ಅನಧಿಕೃತ ಸಂಘಟನೆಗೆ ಸರಕಾರಿ ಶಾಲೆಯಲ್ಲಿ ತರಬೇತಿ ನಡೆಸಲು ಅವಕಾಶ ಮಾಡಿಕೊಟ್ಟಿದೆ.

Join Whatsapp