ಶ್ರೀರಾಮನಿಗೆ ಅವಹೇಳನ ಆರೋಪ: ನಟಿ ನಯನತಾರಾ ವಿರುದ್ಧ FIR

Prasthutha|

ನವದೆಹಲಿ: ನಟಿ ನಯನತಾರಾ ಅಭಿನಯದ ಅನ್ನಪೂರ್ಣಿ ಎಂಬ ಸಿನಿಮಾದದಲ್ಲಿ ನಾಯಕಿ ಹಿಜಾಬ್‌ ಧರಿಸಿ ನಮಾಜ್ ಮಾಡುವ, ಆಕೆಯ ಪಾತ್ರಕ್ಕೆ ಇನ್ನೊಂದು ಪಾತ್ರ ಲವ್‌ ಜಿಹಾದ್‌ಗೆ ಒತ್ತಾಯಿಸುವ ಮತ್ತು ಮತಾಂತರಕ್ಕೆ ಆಮಿಶವೊಡ್ಡುವ ದೃಶ್ಯಗಳಿವೆ ಹಾಗೂ ರಾಮ- ಸೀತಾ ಕೂಡ ಮಾಂಸಾಹಾರಿ ಎಂದು ಹೇಳುವ ಮೂಲಕ ಅವಹೇಳನ ಮಾಡಲಾಗಿದೆ ಎಂದು ದೂರು ದಾಖಲಾಗಿದೆ. ಈ ಸಿನಿಮಾ ಶ್ರೀರಾಮನನ್ನು ಅವಹೇಳನ ಮಾಡುವಂತಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

- Advertisement -

ಭಗವಾನ್ ರಾಮನ ಅವಹೇಳನಕ್ಕಾಗಿ ಅನ್ನಪೂರ್ಣಿ ಸಿನಿಮಾ ಮಾಡಲಾಗಿದೆ ಎಂದು ಶಿವಸೇನೆಯ ಮಾಜಿ ನಾಯಕ ರಮೇಶ್ ಸೋಲಂಕಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಸಿನಿಮಾದಲ್ಲಿ ತಮ್ಮ ಭಾವನೆಗಳಿಗೆ ಧಕ್ಕೆ ತರುವಂತಹ ದೃಶ್ಯಗಳಿವೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಅವರು ಚಿತ್ರದ ವಿರುದ್ಧ ಪ್ರಕರಣ ದಾಖಲಾಗಿದ್ದನ್ನು ತನ್ನ X ಪೋಸ್ಟ್ ಮೂಲಕ ಬಹಿರಂಗಪಡಿಸಿದ್ದಾರೆ. ನಯನತಾರಾ ಅವರ ಚಿತ್ರವು ಕೇವಲ ರಾಮನನ್ನು ಅವಹೇಳನ ಮಾಡುವ ಉದ್ದೇಶವನ್ನು ಮಾತ್ರ ಹೊಂದಿಲ್ಲ, ಇದು ಲವ್ ಜಿಹಾದ್ ಅನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ ಎಂದು ಅವರು ಆರೋಪಿಸಿದ್ದಾರೆ.

Join Whatsapp