ದೆಹಲಿಯಲ್ಲಿ ಶಾಲೆಗಳಿಗೆ ಜನವರಿ 12ರವರೆಗೆ ರಜೆ ವಿಸ್ತರಣೆ

Prasthutha|

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪ್ರಾಥಮಿಕ ಶಾಲಾಗಳಿಗೆ ರಜೆ ಘೋಷಿಸಲಾಗಿದೆ. ದೆಹಲಿಯಲ್ಲಿ ಶೀತಗಾಳಿ ಮತ್ತು ದಟ್ಟವಾದ ಮಂಜು ಹೆಚ್ಚಾಗಿದ್ದು, 5ನೇ ತರಗತಿವರೆಗೆ ಚಳಿಗಾಲದ ರಜೆಯನ್ನು ಜನವರಿ 12ರವರೆಗೆ ವಿಸ್ತರಿಸಲಾಗಿದೆ ಎಂದು ದೆಹಲಿ ಶಿಕ್ಷಣ ಸಚಿವೆ ಅತಿಶಿ ಹೇಳಿದ್ದಾರೆ.

- Advertisement -

ಜ.8ರಿಂದ (ಸೋಮವಾರ)ದಿಂದ ಶಾಲೆಗಳನ್ನು ಪುನರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ, ಶೀತಗಾಳಿ ಮತ್ತು ದಟ್ಟವಾದ ಹೆಚ್ಚಾಗಿರುವುದರಿಂದ ರಜೆಯನ್ನು ವಿಸ್ತರಿಸಲಾಗಿದೆ.

ದೆಹಲಿ ನಗರದಾದ್ಯಂತ ಮುಂದಿನ ಕೆಲವು ದಿನಗಳವರೆಗೆ ದಟ್ಟವಾದ ಮಂಜು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Join Whatsapp