ಪಬ್​ಜಿ ಗೀಳಿಗೆ ಬಿಕಾಂ ವಿದ್ಯಾರ್ಥಿ ಬಲಿ!

Prasthutha|

ಹೈದರಾಬಾದ್: ಆನ್​ಲೈನ್ ಗೇಮ್ ಪಬ್​ಜಿ ಚಟಕ್ಕೆ ವಿದ್ಯಾರ್ಥಿಯೋರ್ವ ಬಲಿಯಾದ ದಾರುಣ ಘಟನೆ ಹೈದರಾಬಾದ್​​​ನ ಪಂಜಾಗುಟ್ಟ ಪೊಲೀಸ್​ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

- Advertisement -

ಅಮ್ಮ ಐ ಲವ್​ ಯೂ….ಹುಷಾರಾಗಿರು ಎಂದು ವಾಟ್ಸ್​ಆಯಪ್​​ನಲ್ಲಿ ತಾಯಿಗೆ ಮೆಸೇಜ್ ಮಾಡಿ
ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ ವಿದ್ಯಾರ್ಥಿ ಹೆಸರು ಅಖಿಲ್​ (21).

ಅಖಿಲ್​ ತಂದೆ ಮರಣಹೊಂದಿದ ನಂತರ ತಾಯಿ ಜೊತೆ ಸೇರಿ ಅಪಾರ್ಟ್​ಮೆಂಟ್​​ನಲ್ಲಿ ವಾಸವಾಗಿದ್ದ. ಅಮೀರ್​ಪೇಟ್ ಸಮೀಪದ ಸಿದಾರ್ಥ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ. ಕಳೆದ ಮೂರು ತಿಂಗಳಿನಿಂದ ಕಾಲೇಜಿಗೂ ಹೋಗದೆ ಪಬ್​ಜಿಗೆ ಜೋತು ಬಿದ್ದು ಹಗಲು ರಾತ್ರಿ ಗೇಮ್ ಆಡುತ್ತಿದ್ದ ಎಂದು ತಿಳಿದುಬಂದಿದೆ.

- Advertisement -

ಕುಟುಂಬದವರು ಬುದ್ಧಿಮಾತು ಹೇಳಿದರೂ ಕೇಳದ ಅಖಿಲ್​ ಆಟಕ್ಕಾಗಿ ಊಟ ಬಿಟ್ಟು ಪಬ್​ಜಿ ಗೇಮ್​ನಲ್ಲಿ ನಿರತನಾಗಿದ್ದ. ಕೊನೆಗೆ ಪಬ್​ಜಿ ಆಟವೇ ಆತನ ಜೀವಕ್ಕೆ ಮುಳುವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಖಿಲ್​ ತಾಯಿ ಪಿ. ಜಯ ತನ್ನ ಗೆಳತಿ ಮನೆಗೆ ಹೋಗಿದ್ದ ಸಮಯ ಮನೆಯಲ್ಲಿ ಇದ್ದ ಅಖಿಲ್ ಅಮ್ಮ ಐ ಲವ್​ ಯೂ….ಮಿಸ್​ ಜೋಪಾನ ಎಂದು ಮೆಸೇಜ್​ ಮಾಡಿದ್ದ, ಈ ಮೆಸೇಜ್​ ನೋಡಿ ಮನೆಗೆ ಓಡಿ ಬಂದ ತಾಯಿಗೆ ಬಾಗಿಲು ಬಂದ್ ಆಗಿರುವುದು ಕಂಡಿದೆ. ಬಾಗಿಲು ತೆರೆಯುವಂತೆ ಮಗನನ್ನು ಕೂಗಿದ್ದಾರೆ. ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕೊನೆಗೆ ಅಕ್ಕಪಕ್ಕದ ಮನೆಯವರ ನೆರವಿನಿಂದ ಬಾಗಿಲು ಒಡೆದು ನೋಡಿದರೆ ಮಗ ನೇಣು ಬಿಗಿದುಕೊಂಡು ಸಾವುಗೀಡಾಗಿರುವುದನ್ನು ನೋಡಿ ತಾಯಿ ಕುಸಿದು ಬಿದ್ದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪಬ್​ಜಿಯಂತಹ ಆನ್​ಲೈನ್ ಗೇಮ್​ಗಳಿಂದ ಅಮಾಯಕ ಯುವಕರು, ವಿದ್ಯಾರ್ಥಿಗಳು ತಮ್ಮ‌ ಕುತ್ತು ತಂದುಕೊಳ್ಳುತ್ತಿದ್ದಾರೆ. ಪಬ್​ಜಿಯಂತಹ ಆನ್​​ಲೈನ್​ ಗೇಮ್​​ಗಳನ್ನು ಕೂಡಲೇ ಬ್ಯಾನ್ ಮಾಡಬೇಕು ಎಂದು ಮೃತನ ತಾಯಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Join Whatsapp