ಡಾ. ಕಫೀಲ್ ಅವರ 2ನೇ ಅಮಾನತು ಆದೇಶಕ್ಕೆ ತಡೆಹಿಡಿದ ಅಲಹಾಬಾದ್ ಹೈಕೋರ್ಟ್

Prasthutha|

ಮಥುರಾ: ಉತ್ತರ ಪ್ರದೇಶ ಸರ್ಕಾರ ಕಳೆದ ವಾರ ಡಾ.ಕಫೀಲ್ ಖಾನ್ ವಿರುದ್ಧ ಹೊರಡಿಸಿದ್ದ 2ನೇ ಅಮಾನತು ಆದೇಶಕ್ಕೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿದೆ.

ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ರೋಗಿಗಳಿಗೆ ಬಲವಂತವಾಗಿ ಚಿಕಿತ್ಸೆ ನೀಡಿದ ಮತ್ತು ಸರ್ಕಾರದ ನೀತಿಯನ್ನು ವಿಮರ್ಶಿಸಿದ ಕಾರಣಕ್ಕೆ ಡಾ.ಕಫೀಲ್ ಅವರನ್ನು ಅಮಾನತು ಮಾಡಿಲಾಗಿತ್ತು.

- Advertisement -

ಈ ಕುರಿತು ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸರಲ್ ಶ್ರೀ ವಾಸ್ತವ ಅವರ ಪೀಠ, ಒಂದು ತಿಂಗಳ ಅವಧಿಯಲ್ಲಿ ಡಾ.ಕಫೀಲ್ ಖಾನ್ ವಿರುದ್ಧ ವಿಚಾರಣೆಯನ್ನು ಮುಗಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ. ಡಾ. ಕಫೀಲ್ ವಿರುದ್ಧ ಜುಲೈ 31, 2019 ರಂದು ಸಲ್ಲಿಸಿದ್ದ ರಿಟ್ ಅರ್ಜಿಯ ಮೂಲಕ ಅಮಾನತು ಆದೇಶವನ್ನು ಜಾರಿಗೊಳಿಸಲಾಗಿದೆ.

ಡಾ. ಕಫೀಲ್ ಖಾನ್ ಪರ ವಾದಿಸಿದ ವಕೀಲರಾದ ಅಜಯ್ ಕುಮಾರ್ ಚೌಧರಿ ಸುಪ್ರೀಮ್ ಕೋರ್ಟ್ ನ 2015ರ ಕಾಲಂ 7 291 ಆದೇಶದನ್ವಯ ಈ ಪ್ರಕರಣದಲ್ಲಿ ಅಮಾನತು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

- Advertisement -