ಪುಟಿನ್ ತಲೆಗೆ 1 ಮಿಲಿಯನ್ ಡಾಲರ್‌ ಬಹುಮಾನ ಘೋಷಿಸಿದ ರಷ್ಯಾದ ಉದ್ಯಮಿ

Prasthutha|

ರಷ್ಯಾ: ಜಗತ್ತಿನ ಬಹುತೇಕ ರಾಷ್ಟ್ರಗಳ ತೀವ್ರ ವಿರೋಧದ ನಡುವೆಯೂ ಉಕ್ರೇನ್ ಮೇಲೆ ಅಮಾನುಷ ದಾಳಿ ಮುಂದುವರಿಸಿರುವ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌‌ ಪುಟಿನ್ ವಿರುದ್ಧ ಇದೀಗ ಅವರದೇ ದೇಶದ ಶ್ರೀಮಂತ ಉದ್ಯಮಿಯೊಬ್ಬರು ಸಿಡಿದೆದ್ದಿದ್ದಾರೆ.
ರಷ್ಯಾವನ್ನು ತೊರೆದಿರುವ ಉದ್ಯಮಿ ಅಲೆಕ್ಸ್ ಕೊನಾನಿಖಿನ್ ಎಂಬುವವರು
ವ್ಲಾದಿಮಿರ್‌‌ ಪುಟಿನ್ ಅವರನ್ನು ಜೀವಂತವಾಗಿ ಬಂಧಿಸುವ ಅಥವಾ ಹತ್ಯೆಗೈಯುವವರಿಗೆ 1 ಮಿಲಿಯನ್ ಡಾಲರ್, ಸುಮಾರು 7.5 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ.

- Advertisement -


ಈ ಕುರಿತು ಫೇಸ್’ಬುಕ್ ಹಾಗೂ ಲಿಂಕ್ಡ್’ ಇನ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕೊನಾನಿಖಿನ್, ವ್ಲಾದಿಮಿರ್ ಪುಟಿನ್ ಅವರ ಫೋಟೋ ಕೆಳಗಡೆ ಬರೆದಿರುವ ಪೋಸ್ಟ್ʼನಲ್ಲಿ, ‘ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ಅನುಸರಿಸಿ, ರಷ್ಯಾ ಮತ್ತು ಅಂತರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿ ಯುದ್ಧ ಅಪರಾಧಿಯಾಗಿ ಪುಟಿನ್ ಅವರನ್ನ ಬಂಧಿಸುವ ಅಧಿಕಾರಿಗಳಿಗೆ ಒಂದು ಸಾವಿರ ಅಮೆರಿಕನ್ ಡಾಲರ್’ಗಳನ್ನು ಪಾವತಿಸುವುದಾಗಿ ನಾನು ಭರವಸೆ ನೀಡುತ್ತೇನೆ’ ಎಂದು ಬರೆದಿದ್ದಾರೆ. ಆದರೆ ಕೊನಾನಿಖಿನ್ ಅವರ ಪೋಸ್ಟ್’ಅನ್ನು ಫೇಸ್’ಬುಕ್ ಅಳಿಸಿ ಹಾಕಿದೆ.
ಮಾಸ್ಕೋದ ಭೌತಶಾಸ್ತ್ರ ಮತ್ತು ತಾಂತ್ರಿಕ ಸಂಸ್ಥೆಯಲ್ಲಿ ಅಧ್ಯಯನ ಮಾಡಿರುವ ಕೊನಾನಿಖಿನ್, ಬ್ಯಾಂಕಿಂಗ್, ಷೇರು ಮಾರುಕಟ್ಟೆ, ರಿಯಲ್ ಎಸ್ಟೇಟ್ ಸೇರಿದಂತೆ ಹಲವಾರು ವ್ಯವಹಾರಗಳಲ್ಲಿ ಭಾರಿ ಹೂಡಿಕೆ ಹೊಂದಿದ್ದಾರೆ

Join Whatsapp