ವಾಹನಗಳಿಗೆ ‘ಫಿಟ್ನೆಸ್ ಸರ್ಟಿಫಿಕೆಟ್ ಪ್ಲೇಟ್’ ಕಡ್ಡಾಯ ! ಸದ್ಯದಲ್ಲೇ ಜಾರಿಯಾಗಲಿದೆ ಹೊಸ ನಿಯಮ

Prasthutha|

ನವದೆಹಲಿ: 15 ವರ್ಷ ಹಳೆಯದಾದ ವಾಹನಗಳನ್ನು ಗುರುತಿಸುವ ಸಲುವಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ ನಿಯಮಕ್ಕಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಹೊಸ ನಿಯಮಗಳ ಪ್ರಕಾರ ಎಲ್ಲಾ ಖಾಸಗಿ ಮತ್ತು ವಾಣಿಜ್ಯ ವಾಹನಗಳ ವಿಂಡ್ ಶೀಲ್ಡ್ ಮೇಲೆ ‘ಫಿಟ್ನೆಸ್ ಸರ್ಟಿಫಿಕೆಟ್ ಪ್ಲೇಟ್’ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ. ಫಿಟ್‌ನೆಸ್ ಪ್ಲೇಟ್ ವಾಹನಗಳ ನಂಬರ್ ಪ್ಲೇಟ್‌ನಂತೆ ಇರಲಿದ್ದು, ಅದರ ಮೇಲೆ ಫಿಟ್‌ನೆಸ್ ಮುಕ್ತಾಯ ದಿನಾಂಕವನ್ನು ಸ್ಪಷ್ಟವಾಗಿ ನಮೂದಿಸಲಾಗುತ್ತದೆ. ಇದರಲ್ಲಿ ನೀಲಿ ಬಣ್ಣದ ಸ್ಟಿಕ್ಕರ್ ಮೇಲೆ ಹಳದಿ ಬಣ್ಣದಲ್ಲಿ ವಾಹನ ಎಷ್ಟು ಕಾಲ ಫಿಟ್ ಆಗಿರುತ್ತದೆ ಎಂಬುದನ್ನು ಪ್ರದರ್ಶಿಸಲಾಗುತ್ತದೆ. ದಿನಾಂಕ-ತಿಂಗಳು-ವರ್ಷ (DD-MM-YY) ಈ ಸ್ವರೂಪದಲ್ಲಿರಲಿದೆ.

- Advertisement -


ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, 20 ವರ್ಷಕ್ಕಿಂತ ಹಳೆಯ 51 ಲಕ್ಷ ಲಘು ಮೋಟಾರು ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯ 17 ಲಕ್ಷ ಮಧ್ಯಮ ಹಾಗೂ ಭಾರಿ ವಾಣಿಜ್ಯ ವಾಹನಗಳು ಭಾರತದ ರಸ್ತೆಗಳಲ್ಲಿ ಓಡಾಡುತ್ತಿವೆ.
ಹೊಸ ನಿಯಮ ಜಾರಿಗೆ ಬಂದ ಬಳಿಕ ವಾಹನ ತಪಾಸಣೆ ವೇಳೆ ಫಿಟ್ನೆಸ್ ಸರ್ಟಿಫಿಕೆಟ್ ಪ್ಲೇಟ್ ಇಲ್ಲದಿರುವುದು ಕಂಡು ಬಂದಲ್ಲಿ ಕಾನೂನು ಉಲ್ಲಂಘಿಸುವ ವಾಹನ ಮಾಲೀಕರಿಗೆ ಭಾರಿ ದಂಡ ವಿಧಿಸಲು ಅವಕಾಶ ಕಲ್ಪಿಸುತ್ತಿದೆ.

Join Whatsapp