ಗಾಝಾ ಹಿಂಸಾಚಾರ | ತನಿಖೆಗೆ ನಿರ್ಣಯ ಮಂಡನೆಯ UNHRC ಸಭೆಗೆ ಭಾರತ ಗೈರು

Prasthutha|

ನವದೆಹಲಿ : ಗಾಝಾದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಕುರಿತು ತನಿಖೆ ನಡೆಸುವುದಕ್ಕೆ ಸಂಬಂಧಿಸಿ ತನಿಖಾ ಆಯೋಗ ರಚಿಸುವ ಕುರಿತ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ(UNHRC)ದ ನಿರ್ಣಯ ಮಂಡನೆ ಸಭೆಯಲ್ಲಿ ಭಾರತ ಗೈರು ಹಾಜರಾಗಿದೆ. ಫೆಲೆಸ್ತೀನ್‌ ವ್ಯಾಪ್ತಿ ಮತ್ತು ಇಸ್ರೇಲ್‌ ಒಳಗೆ ನಡೆದ ʼವ್ಯವಸ್ಥಿತʼ ದೌರ್ಜನ್ಯಗಳ ಬಗ್ಗೆಯೂ ತನಿಖೆ ನಡೆಸುವ ಉದ್ದೇಶ ಈ ಆಯೋಗ ಹೊಂದಿದೆ.

ಇತರ ೧೩ ರಾಷ್ಟ್ರಗಳು ಈ ಸಭೆಯಲ್ಲಿ ಗೈರು ಹಾಜರಾಗಿವೆ. ನಿರ್ಣಯದ ಪರ 14 ಮತಗಳು ಬಿದ್ದಿದ್ದು, 9 ಮತಗಳು ವಿರೋಧವಿದ್ದವು. ಹೀಗಾಗಿ ಜಿನೇವಾದಲ್ಲಿ ತನಿಖಾ ಆಯೋಗ ನಡೆಸುವ ನಿರ್ಣಯಕ್ಕೆ ಸ್ವೀಕೃತವಾಗಿದೆ.

- Advertisement -

ಭಾರತ ಈ ಹಿಂದೆ ಫೆಲೆಸ್ತೀನ್‌ ಪರ ಪ್ರತಿಪಾದಿಸಿತ್ತು. ಆದರೆ, ಇದೀಗ ಈ ಸಭೆಗೆ ಗೈರುಹಾಜರಾಗಿದೆ.  

- Advertisement -