ಕೊಟ್ಟ ಮಾತಿನಂತೆ ನಡೆದುಕೊಂಡ ಅಕ್ಷಯ್ ಯಾದವ್: ಅಂಗಡಿಯಲ್ಲಿ ನಮಾಝ್ ನಿರ್ವಹಿಸಿದ ಮುಸ್ಲಿಮರು

Prasthutha|

ಗುರ್ಗಾಂವ್: ಗುರ್ಗಾಂವ್ ನಿವಾಸಿಗಳು ಮತ್ತು ಬಲಪಂಥೀಯ ಗುಂಪುಗಳು ನಮಾಝ್ ವಿರುದ್ಧ ಬಹಿರಂಗವಾಗಿ ಪ್ರತಿಭಟನೆ ನಡೆಸುತ್ತಿರುವ ಮಧ್ಯೆಯೇ 40 ವರ್ಷದ ಅಕ್ಷಯ್ ಯಾದವ್ ಅವರು, ಮುಸ್ಲಿಮರೇ ಬನ್ನಿ ನನ್ನ ಅಂಗಡಿಯಲ್ಲಿ ನಮಾಝ್ ನಿರ್ವಹಿಸಿ ಎಂದು ಹೇಳುವ ಮೂಲಕ ಸೌಹಾರ್ದ ಮೆರೆದಿದ್ದರು. ಯಾದವ್ ಅವರ ಆಹ್ವಾನವನ್ನು ಸ್ವೀಕರಿಸಿರುವ ಗುರ್ವಾಂವ್ ಮುಸ್ಲಿಮರು ಶುಕ್ರವಾರ ಅವರ ಅಂಗಡಿಯಲ್ಲಿ ನಮಾಝ್ ನೆರವೇರಿಸಿದ್ದಾರೆ.

- Advertisement -

ಗುರ್ಗಾಂವ್ ನ ಸೆಕ್ಟರ್ 12 ರಲ್ಲಿ ಖಾಲಿ ಇರುವ ತಮ್ಮ ಅಂಗಡಿಯನ್ನು ಮುಸ್ಲಿಮ್ ಸಮುದಾಯದ ಜನರಿಗೆ ನೀಡಿರುವ ಅಕ್ಷಯ್ ಯಾದವ್ ಅವರು, ಈ ಸ್ಥಳದಲ್ಲಿ ನೀವು ನಮಾಝ್ ಮಾಡಬಹುದು ಎಂದು ಹೇಳಿದ್ದರು. ಶುಕ್ರವಾರ ಈ ಸ್ಥಳದಲ್ಲಿ ಕನಿಷ್ಠ 20ಕ್ಕೂ ಅಧಿಕ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು. ಮುಂದೆಯೂ ಈ ಜಾಗವನ್ನು ನಮಾಝ್ ಗಾಗಿ ಬಳಸಬಹುದು ಎಂದು ಅವರು ತಿಳಿಸಿದ್ದಾರೆ.
ನವೆಂಬರ್ 12 ರಂದು, ಸೆಕ್ಟರ್ 12ಎ ನಲ್ಲಿ ನಮಾಝ್ ಸ್ಥಳದಲ್ಲಿ ಸಂಘಪರಿವಾರ ಸಂಘಟನೆಯ 80ಕ್ಕೂ ಅಧಿಕ ಕಾರ್ಯಕರ್ತರು ಜಮಾಯಿಸಿ ಘೋಷಣೆ ಕೂಗಿ ನಮಾಝ್ ಗೆ ಅಡ್ಡಿ ಪಡಿಸಿದ್ದರು. ಮಾತ್ರವಲ್ಲ ಈ ಸ್ಥಳವನ್ನು ವಾಲಿಬಾಲ್ ಕೋರ್ಟ್ ಮಾಡುವುದಾಗಿ ಹೇಳಿದ್ದರು.

Join Whatsapp