ಬಜಪೆಯಲ್ಲಿ SDPI ವತಿಯಿಂದ 77ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ

Prasthutha|

ಮಂಗಳೂರು: 77 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಜ್ಪೆ ಪಟ್ಟಣ ಪಂಚಾಯತ್ ಸಮಿತಿ ವತಿಯಿಂದ ಸ್ವಾತಂತ್ರ್ಯ ಉತ್ಸವ ಕಾರ್ಯಕ್ರಮ ಕಿನ್ನಿಪದವು ಎಸ್ ಡಿ ಪಿ ಐ ಕಛೇರಿ ಬಳಿ ನಡೆಯಿತು.

- Advertisement -


ಹಿರಿಯರಾದ ಅಬೂಬಕ್ಕರ್ ಹಾಜಿಯವರು ಧ್ವಜಾರೋಹಣಗೈದರು. ಸಭೆಯ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತ್ ಸಮಿತಿ ಅಧ್ಯಕ್ಷ ಮೊಹಮ್ಮದ್ ಇರ್ಷಾದ್ ಬಜ್ಪೆ ವಹಿಸಿದ್ದರು, ಅಶ್ರಫ್ ಮಾಚಾರ್ ಸ್ವಾತಂತ್ರ್ಯ ದಿನಾಚರಣೆಯ ಬಗ್ಗೆ ಸಂದೇಶ ಬಾಷಣಗೈದರು. ಸಭೆಯಲ್ಲಿ ಎಸ್ ಡಿ ಪಿ ಐ ರಾಜ್ಯ ಸಮಿತಿ ಸದಸ್ಯರಾದಂತಹ ಅಥಾವುಲ್ಲಾ ಜೋಕಟ್ಟೆ, ಎಸ್ ಡಿ ಪಿ ಐ ಬಜ್ಪೆ ಬ್ಲಾಕ್ ಅಧ್ಯಕ್ಷ ರಹೀಮ್ ಕೆ ಎಚ್,ಎಸ್ ಡಿ ಪಿ ಐ ಮುಖಂಡರಾದ ಹಸೈನಾರ್ ಬಜ್ಪೆ, ಸ್ಪೋರ್ಟಿಂಗ್ ಬಜ್ಪೆ ಇದರ ಅಧ್ಯಕ್ಷ ರಿಯಾಜ್, ಅದ್ಧಾಕ ಜರಿ, ಶಲೀಲ್ ಬಜ್ಪೆ ಉಪಸ್ಥಿತರಿದ್ದರು. ಶಿಫಾನ್ ಕಾರ್ಯಕ್ರಮ ನಿರೂಪಿಸಿದರು.

Join Whatsapp