ಹರೇಕಳ: ನಾಳೆ SDPI ಬೈಕ್ ರ‍್ಯಾಲಿ ಮತ್ತು ಚುನಾವಣಾ ಪ್ರಚಾರ ಸಭೆ

Prasthutha|

ಹರೇಕಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹರೇಕಳ ಗ್ರಾಮ ಸಮಿತಿ ಅಧೀನದಲ್ಲಿ ಹರೇಕಳ ಗ್ರಾಮದ ಕಡವಿನ ಬಳಿ ನದಿ ತಟದಲ್ಲಿ ಬಹಿರಂಗ ಚುನಾವಣಾ ಪ್ರಚಾರ ಸಭೆ ಮತ್ತು ಚುನಾವಣಾ ಪ್ರಚಾರಾರ್ಥ ಬೈಕ್ ರ‍್ಯಾಲಿಯನ್ನು ನಾಳೆ (ಗುರುವಾರ) ಹಮ್ಮಿಕೊಳ್ಳಲಾಗಿದೆ ಎಂದು SDPI ಹರೇಕಳ ಗ್ರಾಮ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.  

- Advertisement -

ಬೈಕ್ ರ‍್ಯಾಲಿಯು ಸಂಜೆ 4.30ಕ್ಕೆ ಸರಿಯಾಗಿ ಹರೇಕಳದ ಆಲಡ್ಕದಿಂದ ಪ್ರಾರಂಭಗೊಂಡು, ಹರೇಕಳ ಗ್ರಾಮದ ರಾಜಬೀದಿಗಳಲ್ಲಿ ಸಂಚರಿಸಿ ಸಮಾವೇಶ ನಡೆಯುವ ಸ್ಥಳದಲ್ಲಿ ಸಮಾಪ್ತಿಗೊಳ್ಳಲಿದೆ.

ಸಂಜೆ 7ಗಂಟೆಯ ನಂತರ ಹರೇಕಳ ಕಡವಿನ ಬಳಿಯಲ್ಲಿ ಸಾರ್ವಜನಿಕ ಬಹಿರಂಗ ಸಭೆ ನಡೆಯಲಿದ್ದು, ಈ ಸಭೆಯಲ್ಲಿ SDPI ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಫೈಝಿ, ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮತ್ತು ಮಂಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಸೇರಿದಂತೆ ಪಕ್ಷದ ಜಿಲ್ಲಾ ನಾಯಕರು, ಸ್ಥಳೀಯ ಮಟ್ಟದ ನಾಯಕರು, SDPI ಕ್ಯಾಡೇರ್ ಮತ್ತು ಕಾರ್ಯಕರ್ತರು, ಹಿತೈಷಿಗಳು ಹಾಗೂ ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.