ಕೃಷಿ ಮಸೂದೆಗಳ ವಿರುದ್ಧ ನಮ್ಮ ಹೋರಾಟದೊಂದಿಗೆ ಕೈಜೋಡಿಸಿ | ಅಕಾಲಿ ದಳದಿಂದ ಸರ್ವಪಕ್ಷಗಳಿಗೆ ಕರೆ

Prasthutha|

ಚಂಢೀಗಡ: ಲೋಕಸಭೆಯಲ್ಲಿ ಜಾರಿಗೊಳಿಸಲಾದ ಕೃಷಿ ಕ್ಷೇತ್ರದ ಮೂರು ಮಸೂದೆಗಳ ವಿರುದ್ಧ ತನ್ನ “ಹೋರಾಟ” ದಲ್ಲಿ ಭಾಗಿಯಾಗುವಂತೆ ಶಿರೋಮಣಿ ಅಕಾಲಿ ದಳ ಶನಿವಾರ ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದೆ.

- Advertisement -

ಲೋಕಸಭೆಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ಈ ಮಸೂದೆಗಳ ಬಗ್ಗೆ ವಿರೋಧವನ್ನು ವ್ಯಕ್ತಪಡಿಸದೇ, ಮೌನಸಮ್ಮತಿ ನೀಡುವ ಮೂಲಕ ರೈತರ ಬೆನ್ನಿಗೆ ಚೂರಿ ಹಾಕಿವೆ ಎಂದು ಅಕಾಲಿ ದಳ ಆರೋಪಿಸಿದೆ‌.

ವರ್ಚುವಲ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಎಸ್‌ಎಡಿ ನಾಯಕ ಮತ್ತು ಮಾಜಿ ಸಂಸದ ಪ್ರೇಮ್ ಸಿಂಗ್ ಚಂದುಮಾಜ್ರಾ, “ನಾವು ರೈತರ ಬಗೆಗಿನ ನಮ್ಮ ಕರ್ತವ್ಯದಿಂದ ಹಿಂದೆ ಸರಿಯುವುದಿಲ್ಲ. ರೈತರಿಗೆ ಹಾಗೂ ಪಂಜಾಬ್‌ಗೆ ನ್ಯಾಯ ದೊರಕಿಸಲು ನಿರಂತರವಾಗಿ ಹೋರಾಡುತ್ತೇವೆ” ಎಂದು ಹೇಳಿದರು.

Join Whatsapp