ಮಡಿಕೇರಿಯಲ್ಲಿ ಮುಚ್ಚಿದ ಇಂದಿರಾ ಕ್ಯಾಂಟೀನ್ | ನಿಖರ ಕಾರಣಕ್ಕೆ ಕರವೇ ಆಗ್ರಹ

Prasthutha|

ಮಡಿಕೇರಿ: ಮಡಿಕೇರಿಯಲ್ಲಿರುವ ಇಂದಿರಾ ಕ್ಯಾಂಟೀನ್ ಇಂದು ಮುಚ್ಚಲಾಗಿದ್ದು, ನಿಖರ ಕಾರಣಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟಿನ್ ಹೆಸರು ಬದಲಾಯಿಸುವ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿತ್ತು. ಈ ಬೆಳವಣಿಗೆಯ ನಂತರ ರಾಜ್ಯದಲ್ಲಿ ಅಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದಗಳೂ ನಡೆದಿದ್ದವು. ಇದೀಗ ಮಡಿಕೇರಿ ನಗರದಲ್ಲಿರುವ ಇಂದಿರಾ ಕ್ಯಾಂಟೀನ್ ಅನ್ನು ಮುಚ್ಚಲಾಗಿದೆ.

- Advertisement -

ಸದ್ಯ ಕ್ಯಾಂಟಿನ್ ಮುಚ್ಚಲು ನಿಖರ ಕಾರಣ ನೀಡದಿರುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕರವೇ, ಇಂದಿರಾ ಕ್ಯಾಂಟೀನ್ ಅವಲಂಬಿಸಿಕೊಂಡು ಹಲವು ಕೂಲಿಕಾರ್ಮಿಕರು ಹಾಗೂ ಬಡವರ್ಗದ ಬದುಕುತ್ತಿದ್ದಾರೆ, ಆದರೆ ಇಂದು ಜನರು ಇಂದಿರಾ ಕ್ಯಾಂಟೀನ್ ಕಡೆ ಬಂದು ನೋಡಿದರೆ ಕ್ಯಾಂಟೀನ್ ಮುಚ್ಚಲಾಗಿದೆ. ಇದಕ್ಕೆ ಸಂಬಂಧಪಟ್ಟ ನಗರಸಭೆಯ ಅಧಿಕಾರಿಗಳು ಹಾಗೂ ನಗರಸಭೆಯ ಜನಪ್ರತಿನಿಧಿಗಳು ಪರಿಶೀಲಿಸಿ ಸೂಕ್ತವಾದ ಉತ್ತರವನ್ನು ಮಡಿಕೇರಿ ನಗರದ ಜನತೆಗೆ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯು ಆಗ್ರಹಿಸಿದೆ.

Join Whatsapp