ವಿಮಾನ ಉತ್ಪಾದಕ ಕಂಪನಿ ಬೋಯಿಂಗ್ ನಿಂದ 2000 ಉದ್ಯೋಗ ಕಡಿತ

Prasthutha|

ನವದೆಹಲಿ: ಜಾಗತಿಕ ಆರ್ಥಿಕ ಮಂದಗತಿಯ ಹಿನ್ನೆಲೆಯಲ್ಲಿ ಅಮೆರಿಕ ಮೂಲದ ಪ್ರಸಿದ್ದ ವಿಮಾನಗಳ ಉತ್ಪಾದಕ ಬೋಯಿಂಗ್ ಕಂಪನಿಯು ಉದ್ಯೋಗಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ.

- Advertisement -


ಹಣಕಾಸು ಮತ್ತು ಮಾನವ ಸಂಪನ್ಮೂಲ ವಿಭಾಗಗಳಲ್ಲಿ 2000 ಉದ್ಯೋಗ ಕಡಿತಕ್ಕೆ ಮುಂದಾಗಿರುವ ಬೋಯಿಂಗ್ 2023ರಲ್ಲಿ 10,000 ಉದ್ಯೋಗಿಗಳನ್ನು ನೇಮಿಸುವುದಾಗಿ ಈ ಹಿಂದೆ ಹೇಳಿತ್ತು.


2022ರಲ್ಲಿ 15,000 ಮಂದಿಯನ್ನು ನೇಮಿಸಿದ್ದ ಬೋಯಿಂಗ್, ತನ್ನ ಮೂರನೇ ಒಂದರಷ್ಟು ಉದ್ಯೋಗಗಳನ್ನು ಭಾರತದಲ್ಲಿ ಟಾಟಾ ಕನ್ಸಲ್ಟಿಂಗ್ ಸರ್ವೀಸ್ಗೆ ಹೊರಗುತ್ತಿಗೆ ನೀಡುವುದಾಗಿ ಕಳೆದ ವರ್ಷ ಘೋಷಿಸಿತ್ತು.

- Advertisement -

ಬೋಯಿಂಗ್ ಕಂಪನಿಯು ತನ್ನ ಹಣಕಾಸು ಮತ್ತು ಅಕೌಂಟಿಂಗ್ ಹುದ್ದೆಗಳನ್ನು ಟಿಸಿಎಸ್ ಗೆ ಹೊರಗುತ್ತಿಗೆ ನೀಡುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗ ಕಡಿತಕ್ಕೆ ಸಾಧ್ಯತೆಯಿದೆ.
ಐಟಿ, ಹಣಕಾಸು, ಅಕೌಂಟಿಂಗ್ ಅನ್ನು ಟಿಸಿಎಸ್ ವರ್ಗಾಯಿಸುವುದರಿಂದ ಬೋಯಿಂಗ್ಗೆ ವೆಚ್ಚ ಉಳಿತಾಯ ನಿರೀಕ್ಷಿಸಲಾಗಿದೆ.



Join Whatsapp